ಕ್ರೀಡೆ ಸದೃಢ ಆರೋಗ್ಯಕ್ಕೆ ಸಾಕಾರ

ಕ್ರೀಡೆ ಸದೃಢ ಆರೋಗ್ಯಕ್ಕೆ ಸಾಕಾರ

ಹರಿಹರ,ಫೆ 5- ಮಾನಸಿಕ, ದೈಹಿಕ ಆರೋಗ್ಯ  ಸಧೃಡವಾಗಿರಲು ಕ್ರೀಡೆ ಅತ್ಯುತ್ತಮ ಸಹಕಾರಿ ಯಾಗುತ್ತದೆ ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿ ಬೆಳೆಯಿರಿ ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು. 

ನಗರದ ಡಿ‌.ಆರ್.ಎಮ್. ಕಾಲೇಜ್ ಮೈದಾನ ದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಕಾಮಧೇನು ಫ್ರೆಂಡ್ಸ್ ಗ್ರೂಪ್ ಮತ್ತು ಗೋಲ್ಡನ್ ಈಗಲ್ ಕ್ರಿಕೆಟ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಕ್ರೀಡೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗವಹಿಸಿದ ಮೇಲೆ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ನಮ್ಮ ಬದುಕಿಗೆ ಪೂರಕವಾಗಿವಂತದು, ಕ್ರೀಡೆಯನ್ನು ಪ್ರೋತ್ಸಾಹಿಸಬೇಕೆಂದರು.

ಸಂತೋಷವಾದಗ ಬಹಳ ಸಂತೋಷ ವಾಗದೆ ದುಃಖ ಬಂದಾಗ ತುಂಬಾ ದುಃಖಿಸದೆ ನಮ್ಮ ಜೀವನದ ಬದುಕಲ್ಲಿ ಎರಡನ್ನೂ ಸಮಾನವಾಗಿ ತೆಗೆದುಕೊಂಡು ಹೋಗಬೇಕು.

ಮಾನಸಿಕ ದೈಹಿಕ ಆರೋಗ್ಯ  ಸದೃಡವಾಗಿ ರಲಿಕ್ಕೆ  ಕ್ರೀಡೆ ಅತ್ಯುತ್ತಮ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ತಮ್ಮ ಕ್ರೀಡೆಯಲ್ಲಿ ತೊಡಗಿಸಿಕೊಂಡು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕ್ರೀಡಾಪಟುಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು. 

ಇಂದಿನಿಂದ ಮೂರು ದಿನಗಳ ಕಾಲ ಕ್ರೀಡೆ ನಡೆಯಲಿದೆ. ಪ್ರಥಮ ಬಹುಮಾನ ಮಹರ್ಷಿ ವಾಲ್ಮೀಕಿ ಕಪ್ 60‌.000/ರೂ ನಗದು, ದ್ವಿತೀಯ ಬಹುಮಾನ 30.000/ರೂ ನಗದು ವಾಲ್ಮೀಕಿ ಕಪ್ ವಿಜೇತ ಕ್ರೀಡಾಪಟುಗಳಿಗೆ ನೀಡಲಾಗುವುದು  

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ
ವೀರೇಶ್ ಹನಗವಾಡಿ, ಆಯುಕ್ತರು ಉದಯ್ ಕುಮಾರ್ ಬಿ.ಟಿ, ನಗರ ಸಭಾ ಸದಸ್ಯರಾದ ಎಮ್.ಎಸ್ ವಸಂತಕುಮಾರ್, ನೀತಾ ಮೆಹರಾಡಿ, ಕೆ.ಜಿ ಸಿದ್ದೇಶ್, ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಕೊಂಡಜ್ಜಿ, ನಂದಿಗಾವಿ ಶ್ರೀ ನಿವಾಸ,
ಮಾರುತಿ ಬೇಡರ್, ಮಂಜುನಾಥ್ ಕಳ್ಳೇರ್, ರಾಜು ಏರಣಿ, ಸಂತೋಷ, ರಮೇಶ್, ಎಂ ಪ್ರೇಮ್ ಕುಮಾರ್, ಪರಮೇಶ್ ಸಿರಗೇರಿ, ದಾದಪೀರ್, ಪ್ರೀತಂಬಾಬು, ಸಾಗರ್ ತಳವಾರ್, ಗಣೇಶ್‍, ಸಿದ್ದಾರ್ಥ್, ಮಧು ಸೂದನ, ಪಾರ್ವತಮ್ಮ, ದೇವರಾಜ್, ಕೋಟ್ರೇಶ್, ಧನರಾಜ್, ಬಸವರಾಜ್ ಭೀಮನಗರ, ರಾಜು ಆಟೋ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.