ಗೃಹ ಮಂತ್ರಾಲಯ, ಕರ್ನಾಟಕ ಸರ್ಕಾರವು ರಾಜ್ಯದ ಸಾರ್ವಜನಿಕರಿಗೆ ಅನುಕೂಲವಾಗಲು ಹಾಗೂ ಸುಲಭವಾಗಿ ಮಾಹಿತಿ ಮತ್ತು ಸೇವಾ ಸೌಲಭ್ಯಗಳನ್ನು ನೀಡಲು ಪೊಲೀಸ್ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲೆಗಳ ವೆಬ್ಸೈಟ್ಗಳನ್ನು ಏಕ ರೂಪ ವ್ಯವಸ್ಥೆಯಡಿಯಲ್ಲಿ ಜಾರಿಗೆ ತಂದಿದೆ.
ಅಂಗನವಾಡಿಗೆ ಕಳಪೆ ಆಹಾರ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಳ
ಕೊರೊನಾ ವಾರಿಯರ್ಸ್ಗಳಾಗಿ ಕೆಲಸ ನಿರ್ವಹಿಸಿ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸರ್ಕಾರ 30 ಲಕ್ಷ ರೂ. ನೀಡುವಂತೆ ಹೇಳಿದೆಯಾದರೂ, ಇದುವರೆಗೂ ಯಾರಿಗೂ ಹಣ ದೊರೆತಿಲ್ಲ
ಮೀನು ಬೇಟೆ
ದಾವಣಗೆರೆ ಸಮೀಪದ ಕುಂದುವಾಡ ಕೆರೆಯನ್ನು ಅಭಿವೃದ್ಧಿ ಮಾಡಲು ಕೆರೆ ಬರಿದು ಮಾಡಲಾಗುತ್ತಿದ್ದು, ಕೆರೆಯಲ್ಲಿ ಉಳಿದ ಅಲ್ಪ ನೀರಿನಲ್ಲಿರುವ ಮೀನುಗಳನ್ನು ಹಿಡಿಯಲು ಬಲೆ ಯೊಂದಿಗೆ ಹೆಜ್ಜೆ ಹಾಕುತ್ತಿರುವ ಮೀನುಗಾರರು.
ಹರಪನಹಳ್ಳಿ ತಾಲ್ಲೂಕಿನ ಮೂರು ಗ್ರಾ.ಪಂ.ಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ತೆಕ್ಕೆಗೆ
ಹರಪನಹಳ್ಳಿ ತಾಲ್ಲೂಕಿನಲ್ಲಿ ಗುರು ವಾರ ನಡೆದ ಕೆ.ಕಲ್ಲಹಳ್ಳಿ, ಅಡವಿಹಳ್ಳಿ, ತೌಡೂರು ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಮೂರು ಗ್ರಾಮ ಪಂಚಾಯ್ತಿಗಳ ಆಡಳಿತ ಕೈ ವಶವಾಗಿದೆ.
ಶ್ರೀರಾಮ ಸಂಕೀರ್ತನಾ ಯಾತ್ರಾ ಮೆರವಣಿಗೆ
ಹರಿಹರ ನಗರದಲ್ಲಿ ಶ್ರೀರಾಮ ಸಂಕೀರ್ತನಾ ಯಾತ್ರಾ ಮೆರವಣಿಗೆಯು ಇಂದು ವಿಜೃಂಭಣೆಯಿಂದ ಜರುಗಿತು.
ಕೊಟ್ಟೂರು : ಚಿರಿಬಿ ಗ್ರಾ.ಪಂ ಅಧ್ಯಕ್ಷರಾಗಿ ದೇವೀರಮ್ಮ ಬೂದಿ ನಾಗರಾಜ್
ಕೊಟ್ಟೂರು ತಾಲ್ಲೂಕು ಚಿರಿಬಿ ಗ್ರಾಮ ಪಂಚಾ ಯಿತಿಯ ಅಧ್ಯಕ್ಷರಾಗಿ ಬಿಜೆಪಿಯ ದೇವೀರಮ್ಮ ಬೂದಿ ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಂ. ಚಿನ್ಮಯಾನಂದಸ್ವಾಮಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಹರಿಹರ : ಸೊಸೈಟಿಯಲ್ಲಿ ಕಳ್ಳತನ
ಹರಿಹರ ನಗರದ ಶ್ರೀ ಬಸವೇಶ್ವರ ಕೋ ಆಪರೇಟಿವ್ ಸೊಸೈಟಿಯಲ್ಲಿ ರಾತ್ರಿ ವೇಳೆ ಕಳ್ಳರು ಬಾಗಿಲು ಒಡೆದು ಸುಮಾರು 45,648 ರೂ. ಕಳ್ಳತನ ಮಾಡಿದ್ದಾರೆ.
ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ
ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ವತಿಯಿಂದ ನಗರ ಪಾಲಿಕೆ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಸತ್ತವರ ಹೆಸರಿಗೆ ಖಾತ್ರಿ ಹಣ ಜಮಾ : ಕ್ರಮಕ್ಕೆ ಆಗ್ರಹ
ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಮೃತಪಟ್ಟಿರುವ ಕೂಲಿಕಾರರಿಗೆ ಉದ್ಯೋಗಖಾತ್ರಿಯ ಕೂಲಿ ಹಣವನ್ನು ಅವರ ಖಾತೆಗೆ ಜಮಾ ಮಾಡಿ ಕರ್ತವ್ಯಲೋಪ ಎಸಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಹರಿಹರದ ರಾಮಕೃಷ್ಣಾಶ್ರಮದಿಂದ ಸ್ವಾಮಿ ವಿವೇಕಾನಂದರ ಜಯಂತಿ
ನಗರದ ಶ್ರೀ ರಾಮಕೃಷ್ಣಾಶ್ರಮದ ವತಿಯಿಂದ ಸ್ವಾಮಿ ವಿವೇಕಾನಂದರ 159 ನೇ ಜಯಂತಿ ಅಂಗವಾಗಿ ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು, ಹಂಪಲು ವಿತರಣೆ ಮಾಡಲಾಯಿತು.