ಕುಂದುವಾಡ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಅದರಲ್ಲಿನ ನೀರು ಖಾಲಿ ಮಾಡುತ್ತಿರುವಂತೆಯೇ ನಗರದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಚಿಂತೆ ಆರಂಭವಾಗಿದೆ. ಜಲಸಿರಿ ಯೋಜನೆಯಿಂದ 24x7 ನೀರು ಬರುವುದು ಎಂದೋ ಗೊತ್ತಿಲ್ಲ, ಆದರೆ ಸದ್ಯಕ್ಕೆ ಎಂದಿನಂತೆ ವಾರಕ್ಕೊಮ್ಮೆ ನೀರು ಸಿಕ್ಕರೆ ಸಾಕು ಎಂದು ಮಾತನಾಡಿಕೊಳ್ಳುವಂತಾಗಿದೆ.
ಬಯಲುಸೀಮೆ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಗುರಿ
ಮಳೆ ಪ್ರಮಾಣ ಕಡಿಮೆಯಾಗುವ 14 ಜಿಲ್ಲೆಗಳ 57 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 70 ವಿಧಾನಸಭಾ ಕ್ಷೇತ್ರಗಳು ಬಯಲು ಸೀಮೆ ಎಂದು ಸರ್ಕಾರ ಗುರುತಿಸಿ ಅಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸದುದ್ದೇಶವನ್ನು ಹೊಂದಲಾಗಿದ್ದು, ಚಿತ್ರದುರ್ಗವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ತನ್ಮೂಲಕ ಅಭಿವೃದ್ಧಿ ಪಡಿಸಲು ಮುಂದಾಗಿದೆ
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ತೋಟಗಾರಿಕೆ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮವನ್ನು ಮೊನ್ನೆ ಆಚರಿಸಲಾಯಿತು.
ಮಲೇಬೆನ್ನೂರಿನ ಚಾನಲ್ನಲ್ಲಿ ಅಪರಿಚಿತ ಪುರುಷನ ಶವ ಪತ್ತೆ
ಬಸವಾಪಟ್ಟಣ ವ್ಯಾಪ್ತಿಯ 8ನೇ ಜೋನ್ ಚಾನಲ್ನಲ್ಲಿ ಎರೆಬೂದಿಹಾಳ್ ಗ್ರಾಮದ ಹನುಮಂತಗೌಡ್ರು ಎಂಬುವವರ ಜಮೀನಿನ ಮುಂಭಾಗದ ಚಾನಲ್ ನೀರಿನಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು, ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕ ವಿರೋಧಿ ತಿದ್ದುಪಡಿ ಕೈಬಿಡಲು ಆಗ್ರಹ ನಗರಕ್ಕಾಗಮಿಸಿದ ಪ್ರಚಾರ ಜಾಥಾ
ಮೂರು ಕೃಷಿ ಕಾಯ್ದೆಗಳನ್ನು ರದ್ದು ಪಡಿಸಬೇಕು, ಕಾರ್ಮಿಕ ವಿರೋಧಿ ತಿದ್ದುಪಡಿ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಪ್ರಚಾರ ಜಾಥಾ ಇಂದು ನಗರಕ್ಕಾಗಮಿಸಿತು.
ವಾಸ್ತವಿಕತೆಯಿಂದ ದೂರ ಉಳಿದ ಬಜೆಟ್
ಕೇಂದ್ರ ಸರ್ಕಾರವು ಈ ವರ್ಷವೂ ಯಥಾ ಪ್ರಕಾರ ವಾಸ್ತವಿಕತೆಯಿಂದ ದೂರವಿರುವ ಕಾಲ್ಪನಿಕವಾದ ಬಜೆಟ್ಟನ್ನು ದೇಶದ ಜನರಿಗೆ ನೀಡಿದೆ.
ಪ್ರಾಮಾಣಿಕ ಕಾಯಕಕ್ಕೆ ಇನ್ನೊಂದು ಹೆಸರೇ ಮಾಚಿದೇವರು
ರಾಣೇಬೆನ್ನೂರು : ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾದ ಕಾಯಕ ಯೋಗಿ ಮಡಿವಾಳ ಮಾಚಿದೇವರ ಕೊಡುಗೆ ಮಡಿವಾಳ ಸಮಾಜಕ್ಕೆ ಅಪಾರವಾಗಿದೆ. ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿ ಮಾಚಿದೇವರು ಅಮರರಾಗಿದ್ದಾರೆ ಎಂದು ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ ಹೇಳಿದರು.
ಎಸ್.ಎಸ್.ಎಂ. ನಗರದಲ್ಲೊಂದು ಸ್ಮಾರ್ಟ್ ಸ್ಟೇಡಿಯಂ
ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎನ್ನುವುದು ಎಷ್ಟು ಸತ್ಯವೋ, ಕ್ರೀಡಾಪಟುಗಳ ಸಾಧನೆಗೆ ಕ್ರೀಡಾಂಗಣಗಳು ಅತಿ ಅಗತ್ಯ ಎನ್ನುವುದೂ ಸಹ ಅಷ್ಟೇ ಸತ್ಯ.
ಬಾಡಿಗೆ ಕಟ್ಟದ ಪಾಲಿಕೆ ಮಳಿಗೆಗಳಿಗೆ ಬೀಗ
ನಗರದ ಕುಂದುವಾಡ ಕೆರೆಯಲ್ಲಿ ಸ್ಮಾರ್ಟ್ಸಿಟಿ ಲಿ. ವತಿಯಿಂದ ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಕೆರೆಯಲ್ಲಿನ ಹೂಳನ್ನು ತೆಗೆಯಲಾಗುತ್ತಿದೆ. ಆಸಕ್ತ ರೈತರು ತಮ್ಮ ಜಮೀನಿಗೆ ಅಗತ್ಯವಾದ ಹೂಳನ್ನು ತೆಗೆದುಕೊಂಡು ಹೋಗಬಹುದು
ಉತ್ತಮ ಬಾಂಧವ್ಯ ರೂಢಿಸಿಕೊಂಡರೆ ರೌಡಿ ಪಟ್ಟದಿಂದ ವಿಮುಕ್ತಿ: ಕುಮಾರ್
ಹರಪನಹಳ್ಳಿ : ನಡವಳಿಕೆ ತಿದ್ದಿಕೊಂಡು ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸಿ, ಸಾರ್ವಜನಿಕ ರೊಂದಿಗೆ ಉತ್ತಮ ಬಾಂಧವ್ಯ ರೂಢಿ ಸಿಕೊಂಡರೆ ರೌಡಿಸಂ ಪಟ್ಟದಿಂದ ವಿಮುಕ್ತಿಗೊಳ್ಳಬಹುದು ಎಂದು ಸಿಪಿಐ ಕೆ. ಕುಮಾರ ಕಿವಿಮಾತು ಹೇಳಿದರು.