ಕಾಸಲ್ ಶ್ರೇಷ್ಠಿ ಉದ್ಯಾನವನದ ನೀರಿನ ಟ್ಯಾಂಕ್ ಪುನರ್‌ನಿರ್ಮಾಣಕ್ಕೆ ಚಾಲನೆ

ಕಾಸಲ್ ಶ್ರೇಷ್ಠಿ ಉದ್ಯಾನವನದ ನೀರಿನ ಟ್ಯಾಂಕ್ ಪುನರ್‌ನಿರ್ಮಾಣಕ್ಕೆ ಚಾಲನೆ

ದಾವಣಗೆರೆ, ಜ.29- ನಗರದ 38ನೇ ವಾರ್ಡಿನ ಎಂಸಿಸಿ `ಬಿ’ ಬ್ಲಾಕ್‌ನ ಹೆಸರಾಂತ ಕಾಸಲ್ ಶ್ರೇಷ್ಠಿ ಉದ್ಯಾನವನದಲ್ಲಿರುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದ ಕಾರಣ ಅದರ ಸ್ಥಳದಲ್ಲಿ ಹೊಸ ಟ್ಯಾಂಕ್‌ನ ಪುನರ್ ನಿರ್ಮಾಣ ಕಾರ್ಯಕ್ಕೆ ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ್‌ ಗಡಿಗುಡಾಳ್ ಅವರು ಚಾಲನೆ ನೀಡಿ, ಇದರ ಜಿ.ಎಲ್.ಆರ್ (ಗ್ರೌಂಡ್ ಲೆವೆಲ್ ರಿಸರ್‌ವಯರ್) ಕಾಂಕ್ರೀಟ್ ಕಾಮಗಾರಿಯನ್ನು ಪರಿಶೀಲಿಸಿದರು.

ಸೂಯೇಜ್‌ ಕಂಪನಿಯ ವತಿಯಿಂದ ನಿರ್ಮಾಣ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಎಇಇ ಅಣಜಿ ನಾಗರಾಜಪ್ಪ, ಎಇ ಸಚಿನ್ ಚಕ್ರವರ್ತಿ, ಪಿಎಂ ಸಚಿತ್ ಆಂತೋನಿ ಇವರುಗಳು ಸ್ಥಳದಲ್ಲಿ ಉಪಸ್ಥಿತರಿದ್ದರು. ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರ್ ಮಧುಸೂದನ್‌ ಅವರೂ ಸಹ ಕಾಮಗಾರಿಯನ್ನು ವೀಕ್ಷಿಸಿದರು.