ಸ್ಫೋಟ ಪ್ರಕರಣ : ಜಿಲ್ಲೆಯ ಕೆಲ ಸ್ಫೋಟಕ ಸಂಗ್ರಹ ಸ್ಥಳಗಳಲ್ಲಿ ಪರಿಶೀಲನೆ

ಸ್ಫೋಟ ಪ್ರಕರಣ : ಜಿಲ್ಲೆಯ ಕೆಲ ಸ್ಫೋಟಕ ಸಂಗ್ರಹ ಸ್ಥಳಗಳಲ್ಲಿ ಪರಿಶೀಲನೆ

ದಾವಣಗೆರೆ, ಜ.24- ಶಿವಮೊಗ್ಗ ಜಿಲ್ಲೆಯ ಹುಣಸೋಡು ಸ್ಪೋಟ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತಕೊಂಡಿರುವ ದಾವಣಗೆರೆ ಜಿಲ್ಲಾಡಳಿತವು ಅಧಿಕಾರಿಗಳ ತಂಡದಿಂದ ಸ್ಫೋಟಕ ಸಂಗ್ರಹವಾಗಿದ್ದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ. 

ಸ್ಫೋಟಕ ಸಂಗ್ರಹಿಸಿದ್ದ ಗೋದಾಮುಗಳಿಗೆ   ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದ  ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿದ್ದು, ತಾಲ್ಲೂಕಿನ ಕಾಡಜ್ಜಿ ಹಾಗೂ ಜಗಳೂರು ತಾಲ್ಲೂಕಿನ ತಾಯಿಟೋಣಿ ಗ್ರಾಮದ ಬಳಿ ಇರುವ ಅಧಿಕೃತ ಗೋದಾಮುಗಳಲ್ಲಿದ್ದ ಸ್ಪೋಟಕ ದಾಸ್ತಾನು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. 

ಪರಿಶೀಲನೆ ಬಳಿಕ ಕಾರಣಾಂತರಗಳಿಂದ ಕೆಲ ಗೋದಾಮುಗಳನ್ನು ಸರ್ಕಾರದ ವಶಕ್ಕೆ ಪಡೆದು ಸೀಜ್ ಮಾಡಲಾಯಿತು. ಸ್ಪೋಟಕಗಳನ್ನು ಪಡೆಯಲು ದಾವಣಗೆರೆ ಜಿಲ್ಲಾಡಳಿತ ಕಾನೂನು ಹೇರಿದೆ.

Leave a Reply

Your email address will not be published.