ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ 15ನೇ ವಾರ್ಡ್‌ನಲ್ಲಿ ಅನ್ನ ದಾಸೋಹ

ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ  15ನೇ ವಾರ್ಡ್‌ನಲ್ಲಿ ಅನ್ನ ದಾಸೋಹ

ದಾವಣಗೆರೆ, ಜ.24- ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಗರ ಪಾಲಿಕೆಯ  15ನೇ ವಾರ್ಡಿನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಪಕ್ಕದ  ಉದ್ಯಾನವನದ ಮುಂಭಾಗದಲ್ಲಿ ನಡೆಸಲಾಯಿತು. 

ಮುಕ್ತಿ ಮಂದಿರದ ಶ್ರೀ ವಿಮಲಾ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಸೂಡಿಜುಕ್ತಿ ಹಿರೇಮಠದ ಶ್ರೀ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೆರಕಲಗೋಡು ಬೃಹನ್ಮಠದ ಶ್ರೀ ಹೆಸಲೂರು ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. 

ನಗರ ಪಾಲಿಕೆ ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಶ್ರೀಮತಿ ಆಶಾ ಉಮೇಶ್, ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ, ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ್, ಬಡಾವಣೆ ಠಾಣೆಯ ಪೊಲೀಸ್ ವೃತ್ತಾಧಿಕಾರಿ ಸುರೇಶ್ ಸಗರಿ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

15ನೇ ವಾರ್ಡಿನ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್.ಮಲ್ಲೇಶಪ್ಪ, ಗೌರವಾಧ್ಯಕ್ಷ ಮಂಜುನಾಥ್ ಕಂಬಳಿ, ವಕೀಲರಾದ ಶ್ರೀಮತಿ ವಸುಂಧರಾ, ಪ್ರಧಾನ ಕಾರ್ಯದರ್ಶಿ ಕೆ.ಎಂ. ವೀರಯ್ಯ ಸ್ವಾಮಿ, ವಾರ್ಡಿನ ಪ್ರಮುಖರುಗಳಾದ ಎಸ್.ಟಿ.ಪಿ. ತಿಪ್ಪೇಶ್, ತೀರ್ಥಪ್ಪ, ಹಾಲೇಶಪ್ಪ ಭಾನುವಳ್ಳಿ, ಡಿ.ಕೆ. ರಮೇಶ್, ಉಮೇಶ್, ಚಲುವಪ್ಪ, ಪರಮೇಶ್ವರಪ್ಪ, ನಟರಾಜ್, ರಾಜಣ್ಣ ಬಿಜಾಪುರ, ಸುರೇಶ್, ಗಂಗಾಧರ್, ಲೋಹಿತ್ ಮತ್ತಿತರರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು. 

Leave a Reply

Your email address will not be published.