ಕೊಮಾರನಹಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ

ಕೊಮಾರನಹಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ

ಮಲೇಬೆನ್ನೂರು, ಜ.24 – ಕೊಮಾರನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಗ್ರಾಮದ ಹಳೆಯ ವಿದ್ಯಾರ್ಥಿಗಳು ಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು. 2005 ರಿಂದ ಇತ್ತಿಚೇಗೆ ಸೇವೆ ಸಲ್ಲಿಸಿದ ಶಿಕ್ಷಕರಾದ ಎನ್‍.ಬಿ. ರೇವಣಸಿದ್ದಪ್ಪ, ಎನ್.ಪಿ. ಶಿವಪ್ಪ, ಜಿ.ಪರಮೇಶ್ವರಪ್ಪ, ಕೆ.ರಂಗನಾಥ್, ವಿಶ್ವಭಾರತಿ, ಅನ್ನಪೂರ್ಣೇಶ್ವರಿ, ರೇಣುಕಮ್ಮ, ಶಕುಂತಲಾ ಮತ್ತು ಅಂಗನವಾಡಿ ಕಾರ್ಯಕರ್ತರಾದ ಗೀತಾ, ರೇಖಾ, ಮಂಜುಳ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಳೇಯ ವಿದ್ಯಾರ್ಥಿಗಳಾದ ಜಿ.ಎಂ. ಸುನೀಲ್, ಬಿ.ಎಸ್. ಹಾಲೇಶ್‍, ಕೆ.ಎಲ್. ನಾಗರಾಜ್, ಕೆ.ಮಂಜುನಾಥ್, ಎಸ್‍. ಧನಂಜಯ, ದೀಪಾ, ಕವಿತಾ, ಸೌಮ್ಯ, ರತ್ನಮಾಲಾ ಅವರುಗಳು ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು. 

Leave a Reply

Your email address will not be published.