ಸ್ಟ್ರೆಂಥ್ ಲಿಫ್ಟಿಂಗ್, ಇನ್‍ಕ್ಲೇನ್ ಬೆಂಚ್ ಪ್ರೆಸ್ ಚಾಂಪಿಯನ್‍ಶಿಪ್

ಮಲೇಬೆನ್ನೂರು, ಜ.22 – ಕರ್ನಾಟಕ ರಾಜ್ಯ ಸ್ಟ್ರೆಂಥ್ ಲಿಫ್ಟಿಂಗ್ ಅಸೋಸಿಯೇಷನ್ ದಾವಣಗೆರೆ ಹಾಗೂ ಜಲಕ್ ಫಿಟ್‍ನೆಸ್ ಜಿಮ್, ಮಲೇಬೆನ್ನೂರು ಇವರ ಸಂಯುಕ್ತ ಆಶ್ರಯದಲ್ಲಿ ಇದೇ ದಿನಾಂಕ 24 ರಂದು ಮಲೇಬೆನ್ನೂರಿನ ಜಾಮಿಯಾ ನ್ಯಾಷನಲ್ ಸಂಯುಕ್ತ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಸ್ಟ್ರೆಂಥ್ ಲಿಫ್ಟಿಂಗ್ ಹಾಗೂ ಇನ್‍ಕ್ಲೇನ್ ಬೆಂಚ್‍ಪ್ರೆಸ್ ಚಾಂಪಿಯನ್‍ಶಿಪ್-2020-21 ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಸಿ. ಲಿಂಗ ರಾಜ್ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ರಾಜ್ಯ ಸ್ಟ್ರೆಂಥ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಕೆ. ಧರ್ಮರಾಜ್ ಅವರು ಅಧ್ಯಕ್ಷತೆ ವಹಿಸುವರು ಎಂದು ಸಂಸ್ಥೆಯ ಕಾರ್ಯದರ್ಶಿ ಹೆಚ್. ಗುರುಸ್ವಾಮಿ ತಿಳಿಸಿದ್ದಾರೆ. ದೇಹದ ತೂಕವನ್ನು ಬೆಳಿಗ್ಗೆ 8 ರಿಂದ 10 ರವರೆಗೂ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published.