ದೆಹಲಿಯಲ್ಲಿನ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ರೈತರ ಜಾಥಾ

ದೆಹಲಿಯಲ್ಲಿನ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ರೈತರ ಜಾಥಾ

ದಾವಣಗೆರೆ, ಜ.22- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ, ಇದೇ ದಿನಾಂಕ 26ರಂದು ದೆಹಲಿಯಲ್ಲಿ ರೈತರು ನಡೆಸಲುದ್ದೇಶಿಸಿರುವ ಟ್ರ್ಯಾಕ್ಟರ್ ಪರೇಡ್‍ನಲ್ಲಿ ಭಾಗವಹಿಸಲು ತೆರಳಿರುವ ರೈತ ಕ್ರಾಂತಿ ಹೋರಾಟ-ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡರ ನೇತೃತ್ವದಲ್ಲಿ 30 ಮಂದಿ ರೈತರ ಜಾಥಾ ಇಂದು ನಗರಕ್ಕಾಗಮಿಸಿತ್ತು.

ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಸಮಾಧಿಯ ದರ್ಶನ ಪಡೆದು ದೆಹಲಿಗೆ ಹೊರಟಿರುವ ರೈತರ ಜಾಥಾವು ಹಲವು ಜಿಲ್ಲೆಗಳನ್ನು ಸುತ್ತಾಡಿ ನಗರಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯ ಕಾರ್ಯಕರ್ತರು ನಗರದ ಹೊರವಲಯದ ಪ್ರವಾಸಿ ಮಂದಿರದ ಬಳಿ ಮಂಜೇಗೌಡರ ನೇತೃತ್ವದ ತಂಡಕ್ಕೆ ಸ್ವಾಗತ ಕೋರಿ, ಜಯದೇವ ವೃತ್ತದ ವರೆಗೂ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು.

ಈ ಜಾಥಾದೊಂದಿಗೆ ಜಿಲ್ಲೆಯಿಂದ ಹತ್ತು ಜನ ರೈತರು ದೆಹಲಿರು ಟ್ರ್ಯಾಕ್ಟರ್ ಪರೇ ಡ್‍ನಲ್ಲಿ ಭಾಗವಹಿಸಲು ಕ್ಯಾಂಟರ್ ಮೂಲಕ ತೆರಳಿದರು. ಇವರಿಗೆ ರೈತ ಸಂಘದ ಹುಚ್ಚವ್ವ ನಹಳ್ಳಿ ಮಂಜುನಾಥ್, ಗುಮ್ಮನೂರು ಬಸವ ರಾಜ್ ಮತ್ತಿತರರು ನಗರದಿಂದ ಬೀಳ್ಕೊಟ್ಟರು.

Leave a Reply

Your email address will not be published.