ದಾಸ ಸಾಹಿತ್ಯ ವಿದ್ಯಾಲಯದಿಂದ ಪರೀಕ್ಷೆ

ದಾಸ ಸಾಹಿತ್ಯ ವಿದ್ಯಾಲಯದಿಂದ ಪರೀಕ್ಷೆ

ದಾವಣಗೆರೆ, ಜ.22- ವಿಶ್ವ ಮಧ್ವ ಮಹಾ ಪರಿಷತ್‌ನ ಅಂಗ ಸಂಸ್ಥೆಯಾದ `ಸೌರಭ’ ದಾಸ ಸಾಹಿತ್ಯ ವಿದ್ಯಾಲಯದ ವತಿಯಿಂದ ವಿಶ್ವದಾದ್ಯಂತ ಏರ್ಪಾಡಾಗಿದ್ದ ಅಧ್ಯಾತ್ಮಿಕ ಪರೀಕ್ಷೆಯು ನಗರದ ಪಿ.ಜೆ.ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲೂ ನಡೆಯಿತು. 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು   ಅಧ್ಯಾತ್ಮಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ವಿಶ್ವ ಮಧ್ವ ಮಹಾ ಪರಿಷತ್ತಿನ ಸದ್ಯಸ್ಯರೆಲ್ಲರೂ ಅಧ್ಯಾತ್ಮಿಕ ಪರೀಕ್ಷೆ ಸುಗಮವಾಗಿ ನಡೆಯಲು ಸಹಕರಿಸಿದರು.

Leave a Reply

Your email address will not be published.