ನಿಟುವಳ್ಳಿಯಲ್ಲಿ ಸಿಮೆಂಟ್ ರಸ್ತೆಯನ್ನಾಗಿ ಮಾಡುವ ಕಾಮಗಾರಿಗೆ ಸವಿತಾ ಚಾಲನೆ

ನಿಟುವಳ್ಳಿಯಲ್ಲಿ ಸಿಮೆಂಟ್ ರಸ್ತೆಯನ್ನಾಗಿ ಮಾಡುವ ಕಾಮಗಾರಿಗೆ ಸವಿತಾ ಚಾಲನೆ

ದಾವಣಗೆರೆ,ಜ.21- ನಗರ ಪಾಲಿಕೆಯ 35ನೇ ವಾರ್ಡಿನ ನಿಟುವಳ್ಳಿ ಕಾಲೇಜು ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಮಾಡುವ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಈ ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ ಅವರು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. 

ವಾರ್ಡಿನ ಪ್ರಮುಖರುಗಳಾದ  ಕಾಂಗ್ರೆಸ್ ಮುಖಂಡ ಗಣೇಶ್ ಹುಲ್ಲಮನೆ, ಮಾರುತಿ, ದೇವೇಂದ್ರಪ್ಪ, ಸೋಮಶೇಖರ್, ಹರೀಶ್ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published.