ದಾವಣಗೆರೆ,ಜ.18- ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹ ಸಮರ್ಪಣಾ ಅಭಿಯಾನವು ನಗರ ಪಾಲಿಕೆ 33ನೇ ವಾರ್ಡಿನಲ್ಲಿ ನಿನ್ನೆ ನಡೆಯಿತು. ವಾರ್ಡಿನ ಸರಸ್ವತಿ ನಗರದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಅಭಿಯಾನವು ವಿವಿಧೆಡೆ ಸಂಚರಿಸಿ ಒಂದೇ ದಿನ 55 ಸಾವಿರ ರೂ.ಗಳನ್ನು ಸಂಗ್ರಹಿಸಿತು. ವಾರ್ಡಿನ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಆರ್.ಎಸ್.ಎಸ್. ನ ರಮೇಶ್ ಅವರುಗಳ ನೇತೃತ್ವದಲ್ಲಿ ಅಭಿಯಾನ ಏರ್ಪಾಡಾಗಿತ್ತು.
33ನೇ ವಾರ್ಡಿನಲ್ಲಿ ಶ್ರೀರಾಮ ಮಂದಿರ ನಿಧಿ ಸಂಗ್ರಹ ಸಮರ್ಪಣಾ ಅಭಿಯಾನ

Leave a Reply