ದೀಕ್ಷೆ ಪಡೆದ ಪಾಯಲ್

ದೀಕ್ಷೆ ಪಡೆದ ಪಾಯಲ್

ಹರಪನಹಳ್ಳಿ, ಜ.18- ಬಿಜಾಪುರದ ಯುವತಿ ಪಾಯಲ್ ಕುಮಾರಿ ಪಾರಿಕ್ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಜೈನ ಸನ್ಯಾಸಿನಿ ದೀಕ್ಷೆ ಸ್ವೀಕಾರವನ್ನು ಗುರುಗಳಿಂದ ಪಡೆದುಕೊಂಡರು.

ನರೇಂದ್ರಕುಮಾರಜೀ, ವೈಜಯಂತಿ ಪಾರಿಕ್ ದಂಪತಿಗಳ 19 ವರ್ಷದ ಪುತ್ರಿ ಪಾಯಲ್ ಕುಮಾರಿ ಪಾರಿಕ್ ಅವರು ಭವ್ಯ ಮೆರವಣಿಗೆ ಮೂಲಕ ಆಗಮಿಸಿ ದಾರಿ ಯುದ್ದಕ್ಕೂ ವಿವಿಧ ವಸ್ತುಗಳನ್ನು ಸಾರ್ವಜನಿಕರಿಗೆ ದಾನ ಮಾಡಿದರು. ರಾಷ್ಟ್ರ ಸಂತ ಗುರುಗಳಾದ ನರೇಶ ಮುನೀಜಿ ಮಹಾರಾಜ, ಸೌಲಿಭದ್ರಜೀ ಮಹಾರಾಜ, ಚಂದನ್ ಬಾಲಾಜಿ ಮಹಾರಾಜ, ದೇವೇಂದ್ರ ಪ್ರಭಾಜಿ ಮಹಾರಾಜ, ಧರ್ಮ ಜ್ಯೋತಿ ಮಹಾರಾಜರುಗಳು ಯುವತಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಲು ಆದೇಶ ನೀಡಿದರು.

ಕಾರ್ಯಕ್ರಮದಲ್ಲಿ ಜೈನ ಸಮಾಜದ ಅಧ್ಯಕ್ಷ ಧನರಾಜ್ ಜೈನ್, ಉಪಾಧ್ಯಕ್ಷ ಸುಮೇರಿಮಲ್ ಜೈನ್ , ಮಹಾವೀರ ಕುಮಾರ, ಅಶೋಕ ಕುಮಾರ, ಕಾಂತಿಲಾಲ್ ಜೈನ್, ಉತ್ತಮ ಚಂದ್ ಜೈನ್ , ಗೌತಮ್ ಚಂದ್ , ಮಹಾವೀರ ಭಂಡಾರಿ, ಮಹಾವೀರ ಬನ್ಸಿಲಾಲ್ , ಹನುಮಾನ್ ಚಂದ್ , ಗಣಪತಿ ರಾಜ್ ಜೈನ, ಸಂದೀಪ, ವಿಜಯರಾಜ್ ಸೇರಿದಂತೆ ಜೈನ ಸಮುದಾಯದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.

Leave a Reply

Your email address will not be published.