‘ದಾದಾ ಲೇಖರಾಜ’ ರಿಂದ ‘ಪ್ರಜಾಪಿತ ಬ್ರಹ್ಮಾ’ ವರೆಗಿನ ಅಲೌಕಿಕ ಯಾತ್ರೆ

‘ದಾದಾ ಲೇಖರಾಜ’ ರಿಂದ ‘ಪ್ರಜಾಪಿತ ಬ್ರಹ್ಮಾ’ ವರೆಗಿನ ಅಲೌಕಿಕ ಯಾತ್ರೆ

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಸ್ಥಾಪಕರಾದ ಪಿತಾಶ್ರೀ ಪ್ರಜಾಪಿತ ಬ್ರಹ್ಮಾರವರ ಹೆಸರು ಇಂದು ಎಲ್ಲರಿಗೂ ಚಿರಪರಿಚಿತವಾಗಿದೆ. ಕ್ರಿ.ಶ 1936 ರಿಂದ ಕ್ರಿ.ಶ 1969 ರವರೆಗೆ 33 ವರ್ಷಗಳವರೆಗೆ ಸತತವಾಗಿ ತಪಸ್ಸಿನಲ್ಲಿ ಲೀನರಾಗಿ ‘ಸಂಪೂರ್ಣ ಬ್ರಹ್ಮಾ’ ಎಂಬ ಉನ್ನತ ಸ್ಥಿತಿಯನ್ನು ಪಡೆದುಕೊಂಡು ಇಂದಿಗೂ ವಿಶ್ವ-ಸೇವೆಯನ್ನು ಮಾಡುತ್ತಿದ್ದಾರೆ. ಅವರ ಅಸಾಧಾರಣ, ಅದ್ವಿತೀಯ ಸೇವೆಯು 5000 ವರ್ಷಗಳ ಇತಿಹಾಸದಲ್ಲಿ ಎಲ್ಲಿಯೂ ಸಿಗಲಾರದು. ವರ್ತಮಾನ ಸಮಯದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯವು ವಿಶ್ವದಾದ್ಯಂತ 132 ರಾಷ್ಟ್ರಗಳಲ್ಲಿ 8500 ಸೇವಾ ಕೇಂದ್ರಗಳ ಮೂಲಕ ಮಾನವ-ಸೇವೆಯನ್ನು ಸಲ್ಲಿಸುತ್ತಿದೆ. ಪಿತಾಶ್ರೀ ಬ್ರಹ್ಮಾ ಬಾಬಾರವರು ಪರಮಪಿತ ಪರಮಾತ್ಮ ಶಿವನ ಆಜ್ಞೆಯಂತೆ ಕಲಿಯುಗ ಸೃಷ್ಟಿಯನ್ನು ಸತ್ಯಯುಗಿ ಸೃಷ್ಟಿಯನ್ನಾಗಿ ಪರಿವರ್ತನೆ ಮಾಡಲು ಶಿವನ ಭಾಗ್ಯಶಾಲಿ ರಥವಾದರು. ಹುಸೇನ್‍ಗೆ ಇರುವಷ್ಟೇ ಗೌರವ ಅವನ ಕುದುರೆಗೂ ಇದೆ. ಇದೇ ರೀತಿ ಸರ್ವ ಶಕ್ತಿವಂತ, ಸರ್ವಜ್ಞ, ಸರ್ವ ರಕ್ಷಕ ಪರಮಪಿತ ಪರಮಾತ್ಮ ಶಿವನಿಗೆ ಇರುವ ಮಹಿಮೆಯು ಅವರ ರಥವಾದ ಪಿತಾಶ್ರೀ ಬ್ರಹ್ಮಾರವರಿಗೂ ಇದೆ. ಪರಮಾತ್ಮ ಶಿವನು ಅವರ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿ, ವಿಶ್ವ ಪರಿವರ್ತನೆಯ ಕಾರ್ಯವನ್ನು ಮಾಡುತ್ತಿದ್ದಾನೆ. ಪರಮಾತ್ಮನೇ ಸ್ವತಃ ಪಿತಾಶ್ರೀ ಬ್ರಹ್ಮಾ ಬಾಬಾರವರನ್ನು ಆಯ್ಕೆ ಮಾಡಿಕೊಂಡಿದ್ದಾನೆಂದರೆ, ಅವರಲ್ಲಿ ಅಂತಹ ವಿಶೇಷತೆಗಳೇನಿದ್ದವು? ಬನ್ನಿ ಈಗ ನಾವು ಅವರ ಬಗ್ಗೆ ಸಂಕ್ಷಿಪ್ತವಾಗಿ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳೋಣ.

ಪಿತಾಶ್ರೀ ಬ್ರಹ್ಮಾರವರ ಜನ್ಮ ಹೈದರಾಬಾದ್ (ಸಿಂಧ್ ಪ್ರಾಂತ್ಯ)ನಲ್ಲಿ ಒಂದು ಸಾಧಾರಣ ಕುಟುಂಬದಲ್ಲಿ ಆಯಿತು. ಅವರ ಪೂರ್ವಾಶ್ರಮದ ಹೆಸರು ‘ದಾದ ಲೇಖರಾಜ’. ಅವರ ಲೌಕಿಕ ತಂದೆಯವರು ಹಳ್ಳಿಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ದಾದಾ ಲೇಖರಾಜರವರು ತಮ್ಮ ವಿಶೇಷ ಬೌದ್ಧಿಕ ಪ್ರತಿಭೆ, ವ್ಯವಹಾರಿಕ ಕೌಶಲ್ಯತೆ, ಶಿಷ್ಟಾಚಾರ, ಕಠಿಣ ಪರಿಶ್ರಮ, ಉತ್ತಮ ಸ್ವಭಾವ ಮತ್ತು ವಜ್ರ ವೈಢೂರ್ಯಗಳನ್ನು ಪರೀಕ್ಷಿಸುವ ವಿಶೇಷ ಕೌಶಲ್ಯದಿಂದ ಸುಪ್ರಸಿದ್ಧ ವಜ್ರ ವ್ಯಾಪಾರಿಯಾದರು. ಅವರ ವ್ಯಾಪಾರ ಕೇಂದ್ರ ಕೊಲ್ಕೊತ್ತಾ ಆಗಿತ್ತು.

ಭಕ್ತಿ-ಭಾವನೆ ಮತ್ತು ನೀತಿ-ನಿಯಮಗಳಲ್ಲಿ ಪಕ್ಕಾ ಆಗಿದ್ದರು : ವಜ್ರ ವ್ಯಾಪಾರಿಯಾದ ಕಾರಣ ಪಿತಾಶ್ರೀಯವರು ಆ ಸಮಯದ ರಾಜ ಪರಿವಾರದೊಂದಿಗೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿದ್ದರು. ಅಪಾರ ಧನ-ಸಂಪತ್ತು ಮತ್ತು ಗೌರವ-ಪ್ರತಿಷ್ಠೆಯನ್ನು ಪಡೆದರೂ ಸಹ ಸ್ವಭಾವದಲ್ಲಿ ನಮ್ರತೆ, ಮಧುರತೆ ಮತ್ತು ಪರೋಪಕಾರದ ಭಾವನೆಗಳಿದ್ದವು. ಅವರು ಎಂತಹ ಪರಿಸ್ಥಿತಿಯಲ್ಲಿಯೂ, ಯಾವುದೇ ಪ್ರಲೋಭನೆಗೆ ಒಳಗಾಗಿ ಭಕ್ತಿ-ಭಾವನೆ ಮತ್ತು ಧಾರ್ಮಿಕ ನಿಯಮಗಳನ್ನು ಉಲ್ಲಂಘಿಸಲಿಲ್ಲ. ಅನೇಕ ಬಾರಿ ಕೆಲವು ರಾಜರುಗಳು ಮತ್ತು ಧನ್ಯಾಢ್ಯ ವ್ಯಾಪಾರಿಗಳ ಬಳಿ ಔತಣಕೂಟವಿದ್ದಾಗ, ಅವರು ಕೇವಲ ಸಸ್ಯಾಹಾರವನ್ನು ಸ್ವೀಕರಿಸುತ್ತಿದ್ದರು. ಅನೇಕ ಬಾರಿ ತಮ್ಮ ಪೂಜಾ ಸಮಯದಲ್ಲಿ ಯಾರಾದರೂ ರಾಜರು ಅಥವಾ ಧನಾಢ್ಯರು ಬಂದರೆ, ಅವರ ಸ್ವಾಗತವನ್ನು ಮಾಡಲಿಕ್ಕೆ ತಮ್ಮ ಕಡೆಯಿಂದ ಇನ್ನೊಬ್ಬರನ್ನು ಕಳುಹಿಸುತ್ತಿದ್ದರು. ತಾವು ಮಾತ್ರ ಧಾರ್ಮಿಕ ರೀತಿ-ನೀತಿಗಳನ್ನು ಬಿಡುತ್ತಿರಲಿಲ್ಲ. ಈ ರೀತಿಯಾಗಿ ಅವರು ದೃಢಪ್ರತಿಜ್ಞೆ ಮತ್ತು ನಿಯಮಗಳಲ್ಲಿ ಪಕ್ಕಾ ಆಗಿದ್ದರು. ಅವರು ಶ್ರೀ ನಾರಾಯಣನ ಪರಮ ಭಕ್ತರಾಗಿದ್ದರು.                  ಶ್ರೀ ನಾರಾಯಣನ ಚಿತ್ರವನ್ನು ಸದಾ ತಮ್ಮ ಬಳಿಯಲ್ಲಿ ಇಟ್ಟುಕೊಳ್ಳುತ್ತಿದ್ದರು.

ಆಕರ್ಷಕ ವ್ಯಕ್ತಿತ್ವ ಮತ್ತು ಮಧುರ ಸ್ವಭಾವ : ಪಿತಾಶ್ರೀ ಬ್ರಹ್ಮಾರವರ ವ್ಯಕ್ತಿತ್ವವು ಬಹಳ ಆಕರ್ಷಕವಾಗಿತ್ತು. ಅವರ ಮುಖಮಂಡಲದಲ್ಲಿ ಸದಾಕಾಲ ದಿವ್ಯಪ್ರಭೆ ಇರುತ್ತಿತ್ತು. ಮುಖದಲ್ಲಿ ಸದಾ ಮುಗುಳ್ನಗೆ ಇರುತ್ತಿತ್ತು. 90 ವರ್ಷಗಳ ಇಳಿ ವಯಸ್ಸಿನಲ್ಲಿಯೂ ಅವರ ಸೊಂಟವು ಬಾಗಿರಲಿಲ್ಲ. ದೃಷ್ಟಿಯೂ ಚೆನ್ನಾಗಿತ್ತು. ಕಿವಿಗಳು ಮಂದ-ಸ್ವರವನ್ನೂ ಕೇಳುತ್ತಿದ್ದವು. ಬೆಟ್ಟ-ಗುಡ್ಡಗಳನ್ನು ಸಹಜವಾಗಿ ಹತ್ತುತ್ತಿದ್ದರು. ಬ್ಯಾಡ್ಮಿಂಟನ್ ಸಹ ಆಡುತ್ತಿದ್ದರು. ಯಾರ ಆಸರೆಯಿಲ್ಲದೇ ನಡೆಯುತ್ತಿದ್ದರು. ಅವರು ಪ್ರತಿದಿನ 18-20 ಗಂಟೆಗಳ ಕಾಲ ಸೇವೆಯನ್ನು ಮಾಡುತ್ತಿದ್ದರು. ಇದರಿಂದ ನಾವು ಅವರ ಜೀವನವು ಎಷ್ಟು ಸಂಯಮ-ನಿಯಮಗಳಿಂದ ಕೂಡಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಆಲಸ್ಯ ಮತ್ತು ನಿರಾಶೆಗಳು ಎಂದಿಗೂ ಅವರನ್ನು ಸ್ಪರ್ಶಿಸಲಿಲ್ಲ. ರಾಜಕುಲೋಚಿತ ವರ್ತನೆ, ಶಿಷ್ಟಾಚಾರ, ಮಧುರ-ಸ್ವಭಾವ ಮತ್ತು ಉಜ್ವಲ ಚಾರಿತ್ರ್ಯದ ಕಾರಣದಿಂದ ಅವರಿಗೆ ಉನ್ನತ ಗೌರವವಿತ್ತು. ಪಿತಾಶ್ರೀಯವರು ಸ್ವಭಾವದಿಂದಲೇ ಉದಾರಚಿತ್ತರು ಮತ್ತು ದಾನಿಯಾಗಿದ್ದರು. ಸಿಂಧ್ ಹೈದರಾಬಾದ್‍ನ ಪ್ರಸಿದ್ಧ ದಾನಿ ‘ಕಾಕ ಮೂಲಚಂದ್ ಆಜ್‍ವಾಲಾ’ ಇವರ ಚಿಕ್ಕಪ್ಪ ಆಗಿದ್ದರು. ಪಿತಾಶ್ರೀಯವರು ಅವರೊಂದಿಗೆ ದೀನ-ದಲಿತರಿಗೆ ದಾನ ನೀಡುತ್ತಿದ್ದರು.

ದಿವ್ಯ ಸಾಕ್ಷಾತ್ಕಾರಗಳಿಂದ ಅಲೌಕಿಕ ಜೀವನದ ಪ್ರಾರಂಭ : ಪಿತಾಶ್ರೀಯವರ ವ್ಯಾವಹಾರಿಕ ಮತ್ತು ಕೌಟುಂಬಿಕ ಜೀವನ ಲೌಕಿಕ ದೃಷ್ಟಿಕೋನದಿಂದ ಬಹಳ ಸಫಲ ಮತ್ತು ಸಂತುಷ್ಟವಾಗಿತ್ತು. ಆದರೆ, ಅವರ 60ನೇ ವಯಸ್ಸಿನಲ್ಲಿ ಮನಸ್ಸು ಭಕ್ತಿಯೆಡೆಗೆ ಸೆಳೆಯಿತು. ಅವರು ತಮ್ಮ ವ್ಯಾವಹಾರಿಕ ಜೀವನ ದಿಂದ ಸ್ವಲ್ಪ ಬಿಡುವು ಮಾಡಿಕೊಂಡು ಈಶ್ವರನ ಮನನ-ಚಿಂತನೆಗಳಲ್ಲಿ ಲೀನವಾಗಿರುತ್ತಿದ್ದರು. ಅಂತರ್ಮುಖಿಯಾಗಿ ವಿಚಾರ-ಸಾಗರ ಮಂಥನ ಮಾಡುತ್ತಿದ್ದರು. ಒಮ್ಮೆ ಅವರಿಗೆ ವಿಷ್ಣು-ಚತುರ್ಭು ಜನ ಸಾಕ್ಷಾತ್ಕಾರವಾಯಿತು. ಶ್ರೀ ವಿಷ್ಣುವು ಅವ್ಯಕ್ತ ಶಬ್ದಗಳಲ್ಲಿ ಪಿತಾಶ್ರೀಯವರಿಗೆ ‘ಅಹಂ ಚತುರ್ಭುಜ ತತತ್ವಮ್’ ಅರ್ಥಾತ್ ನೀನು ವಾಸ್ತವಿಕ ಸ್ವರೂಪದಲ್ಲಿ ಶ್ರೀ ನಾರಾಯಣ ಆಗಿದ್ದೀಯ’ ಎಂದರು. ಸ್ವಲ್ಪ ಸಮಯದ ನಂತರ ಅವರು ತಮ್ಮ ಮಿತ್ರನ ಮನೆಯಲ್ಲಿ ತಂಗಿದ್ದರು. ಧ್ಯಾನದಲ್ಲಿದ್ದಾಗ ಅವರಿಗೆ ಪರಮಪಿತ ಪರಮಾತ್ಮ ಶಿವನ ಜ್ಯೋತಿರ್ಮಯ ಸ್ವರೂಪದ ಸಾಕ್ಷಾತ್ಕಾರವಾಯಿತು. ಪರಮಾತ್ಮ ಶಿವನು ಅವರಿಗೆ ಈ ಕಲಿಯುಗಿ ಸೃಷ್ಟಿಯ ವಿನಾಶವು ಅಣುಯುದ್ಧ ಮತ್ತು ಹೈಡ್ರೋಜನ್ ಬಾಂಬ್‍ಗಳ ಮೂಲಕ ಮತ್ತು ಅನೇಕ ಗೃಹಯುದ್ಧ ಹಾಗೂ ಪ್ರಾಕೃತಿಕ ವಿಕೋಪಗಳ ಮೂಲಕ ಆಗುವುದರನ್ನು ಸಾಕ್ಷಾತ್ಕಾರವನ್ನು ಮಾಡಿಸಿದನು. ಕ್ರಿ.ಶ 1936 ರಲ್ಲಿ ಈ ಸಾಕ್ಷಾತ್ಕಾರಗಳಾದವು. ಆಗ ಅಮೇರಿಕಾ ಮತ್ತು ರಷ್ಯಾಗಳು ಇನ್ನೂ ಅಣು ಬಾಂಬ್‍ಗಳ ಸಂಶೋಧನೆಯನ್ನು ಮಾಡಿರಲಿಲ್ಲ. ಪಿತಾಶ್ರೀಯವರಿಗೆ ಈ ಸಾಕ್ಷಾತ್ಕಾರಗಳಾದಾಗ ಅವರು ವ್ಯಾಪಾರವನ್ನು ನಿಲ್ಲಿಸುವ ನಿರ್ಣಯವನ್ನು ಕೈಗೊಂಡರು. ಕೋಲ್ಕೊತ್ತಾಗೆ ಹೋಗಿ ತಮ್ಮ ಪಾಲುದಾರನೊಂದಿಗೆ ತಮ್ಮ ದೃಢಸಂಕಲ್ಪವನ್ನು ತಿಳಿಸಿ, ವ್ಯಾಪಾರದಿಂದ ಬೇರೆಯಾದರು.

ಪರಮಪಿತ ಪರಮಾತ್ಮ ಶಿವನ ದಿವ್ಯ ಸಂದೇಶ : ಈ ಘಟನೆಯ ಸ್ವಲ್ಪ ದಿವಸಗಳ ನಂತರ ಒಂದು ದಿನ ಪಿತಾಶ್ರೀಯವರ ಮನೆಯಲ್ಲಿ ಸತ್ಸಂಗ ನಡೆಯುತ್ತಿತ್ತು. ಪಿತಾಶ್ರೀಯವರು ಆಕಸ್ಮಿಕವಾಗಿ ಸಭೆಯಿಂದ ಎದ್ದುಹೋಗಿ ತಮ್ಮ ಕೊಠಡಿಗೆ ತೆರಳಿ, ಏಕಾಗ್ರಚಿತ್ತರಾಗಿ ಧ್ಯಾನಾಸಕ್ತರಾದರು. ಅದು ಅವರ ಜೀವನದ ಬಹಳ ಮಹತ್ವಪೂರ್ಣವಾದ ಘಟನೆ ಯಾಗಿತ್ತು. ಅವರ ಧರ್ಮಪತ್ನಿಯಾದ ಯಶೋದ ಮತ್ತು ಸೊಸೆಯಾದ ಬೃಜೇಂದ್ರರವರಿಗೆ ಪಿತಾಶ್ರೀ ಯವರ ನೇತ್ರಗಳಲ್ಲಿ ಹೊಳೆಯುವ ಕೆಂಪು ದೀಪದ ದರ್ಶನವಾಯಿತು. ಪಿತಾಶ್ರೀಯವರ ಕೊಠಡಿಯು ಪ್ರಕಾಶಮಯವಾಗಿತ್ತು. ಇಷ್ಟರಲ್ಲಿಯೇ ಒಂದು ಧ್ವನಿ ಮೊಳಗಿತು. ಪಿತಾಶ್ರೀಯವರ ಬಾಯಿಯಿಂದ ಯಾರೋ ಮಾತನಾಡಿದಂತಿತ್ತು. ಆ ಶಬ್ದಗಳಾಗಿದ್ದವು –

ಪುರುಷ ವರ್ಗವು ನಾರಿ ಯನ್ನು ಕೇವಲ ಭೋಗದ ವಸ್ತು ವೆಂದು ತಿಳಿ ದಿತ್ತು. ವಾಸ್ತವದಲ್ಲಿ ಪ್ರಪಂಚದಾದ್ಯಂತ ಇರುವ ಜನರು ಕಾಮ-ಕ್ರೋಧಾದಿ ವಿಕಾರಿ ಗುಣಗಳಿಗೆ ವಶೀಭೂತರಾಗಿದ್ದರು, ಅವುಗಳನ್ನು ಸಹಜ-ಸ್ವಭಾವಗಳೆಂದು ತಿಳಿದುಕೊಂಡಿದ್ದರು. ದೈವಿ-ಸಂಪ್ರದಾಯವು ಸಂಪೂರ್ಣವಾಗಿ ನಾಶವಾ ಗಿತ್ತು. ಅಸುರಿ ಸಂಪ್ರದಾಯವು ತನ್ನ ಕಪಿಮುಷ್ಟಿ ಯಲ್ಲಿ ಎಲ್ಲರನ್ನು ಹಿಡಿದಿಟ್ಟುಕೊಂಡಿತ್ತು. ಆದ್ದರಿಂದ ಪರಮಪಿತ ಪರಮಾತ್ಮ ಶಿವನು ಧರ್ಮಗ್ಲಾನಿಯ ಇಂತಹ ಸಮಯದಲ್ಲಿ ಪಿತಾಶ್ರೀಯವರನ್ನು ನಿಮಿತ್ಯರನ್ನಾಗಿ ಮಾಡಿ ವಿಶ್ವದಲ್ಲಿ ಸದಾಚಾರ, ನಿರ್ವಿಕಾರಿ ಗುಣ ಮತ್ತು ಪವಿತ್ರತೆ ಅರ್ಥಾತ್ ದೈವಿ ಸಂಪ್ರದಾಯದ ಪುನರ್ ಸ್ಥಾಪನೆಯ ಕಾರ್ಯವನ್ನು ಮಾಡಿದನು. ಪಿತಾಶ್ರೀಯವರು ಪರಮಾತ್ಮ ಶಿವನಿಂದ ನೀಡಲ್ಪಟ್ಟ ಜ್ಞಾನದನುಸಾರವಾಗಿ ನಿಯಮಗಳನ್ನು ಪಾಲನೆ ಮಾಡುವುದರಲ್ಲಿ ಎಲ್ಲರಿಗಿಂತ ಮುಂದೆ ಇದ್ದರು.

ಪಿತಾಶ್ರೀಯವರ ಬಾಯಿಯಿಂದ ಪರಮ ಪಿತ ಪರಮಾತ್ಮ ಶಿವನು ‘ಸರ್ವ ದುಃಖಗಳು ಮತ್ತು ಸಮಸ್ಯೆಗಳ ಮೂಲ ದೇಹ-ಅಭಿಮಾನ ಮತ್ತು ಮನೋವಿಕಾರಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರ ಮತ್ತು ಆಲಸ್ಯಗಳಾಗಿವೆ’ ಎಂದು ತಿಳಿಸಿದ್ದಾನೆ. ಆದ್ದರಿಂದ ಇವುಗಳ ಮೇಲೆ ವಿಜಯವನ್ನು ಪಡೆಯುವುದು ಅವಶ್ಯಕವಾಗಿದೆ. ಪ್ರತಿಯೊಬ್ಬ ರಿಗೂ ಆಹಾರ-ವಿಚಾರ, ಸಂಗ ಇತ್ಯಾದಿಯನ್ನು ಸಾತ್ವಿಕ ಮಾಡಿಕೊಳ್ಳಲು ತಿಳಿಸಲಾ ಯಿತು. ವಿಶ್ವದಲ್ಲಿ ವರ್ತಮಾನ ಸಮಯದಲ್ಲಿ ಬ್ರಹ್ಮಚ ರ್ಯದ ಪಾಲನೆ ಮಾಡುವುದು ಅತ್ಯವಶ್ಯಕ ವಾಗಿದೆ ಎಂಬುದನ್ನು ತಿಳಿಸಲಾಯಿತು. ಬ್ರಹ್ಮ ಚರ್ಯವಿಲ್ಲದೇ ಯೋಗಿಯಾಗುವುದು ಮತ್ತು ಮನೋವಿಕಾರಗಳನ್ನು ಜಯಿಸುವುದು ಅಸಾಧ್ಯ.

ಈ ಶಿಕ್ಷಣದಿಂದ ಕೆಲವು ವಿಕಾರಿ ಜನರು ‘ನಮ್ಮಿಂದ ಭೋಗ-ಜೀವನವನ್ನು ಕಸಿದುಕೊಳ್ಳ ಲಾ ಗುತ್ತಿದೆ’ ಎಂಬುದನ್ನು ಮನಗಂಡು ದಂಗೆ ಎದ್ದರು. ಅವರ ಹೃದಯವಿದೀರ್ಣವಾಯಿತು. ಅವರು ಸಾಕಷ್ಟು ಕೋಲಾಹಲವನ್ನೇ ಹಬ್ಬಿಸಿ ದರು. ಪಿತಾಶ್ರೀ ಯವರ ಭವನಕ್ಕೆ ಬೆಂಕಿ ಇಟ್ಟರು. ಈ ರೀತಿಯಾಗಿ ಕೆಸರೆರಚಾಟ ನಡೆ ಯಿತು. ಅನೇಕ ತೊಂದರೆಗಳನ್ನು ನೀಡಿದರು. ಆದರೆ, ಆ ಮನುಜರಿಗೆ ಈ ಶಿಕ್ಷಣವು ಸ್ವತಃ ಪರಮಪಿತ ಪರಮಾತ್ಮನಿಂದ ನೀಡಲಾಗಿತ್ತು ಎಂಬುದು ತಿಳಿದಿರಲಿಲ್ಲ. ಆ ಪರಮಾತ್ಮನೇ ಸಕಲ ಮನುಷ್ಯಾತ್ಮರಿಗೆ ಈ ಆದೇಶವನ್ನು ನೀಡುತ್ತಿದ್ದನು. ಆ ಕಲ್ಯಾಣಕಾರಿಯಾದ ಪರಮಾತ್ಮನ ಕಾರ್ಯವು ನಿಲ್ಲಲು ಸಾಧ್ಯವಿಲ್ಲ. ಆದ್ದರಿಂದ ಆ ಎಲ್ಲಾ ವಿರೋಧ ಮತ್ತು ಅಡ್ಡಿ-ಆತಂಕಗಳಿದ್ದರೂ ಪರಮಾತ್ಮನ ಮೇ ಲಿನ ಸತ್ಯ-ಪ್ರೀತಿ ಮತ್ತು ಪವಿತ್ರತೆಯಿಂದ ಅನೇಕ ನರ-ನಾರಿಯರು ಸತ್ಸಂಗಕ್ಕೆ ಬರತೊಡಗಿದರು.

ಅಲೌಕಿಕ ಮರುಜನ್ಮವಾದ ಕಾರಣ ‘ಪ್ರಜಾಪಿತ ಬ್ರಹ್ಮಾ’ ಎಂಬ ನಾಮಕರಣವಾಯಿತು

ಪಿತಾಶ್ರೀಯವರು ಶ್ರೇಷ್ಠ ಪುರುಷಾರ್ಥ ಮಾಡುವಂತಹ ಕನ್ಯೆಯರು ಮತ್ತು ಮಾತೆಯರ (ಬ್ರಹ್ಮಾಕುಮಾರಿಯರ) ಒಂದು ಟ್ರಸ್ಟ್ ಮಾಡಿ, ತಮ್ಮ ಎಲ್ಲಾ ಚಲ-ಅಚಲ ಸಂಪತ್ತನ್ನು ಮನುಕುಲದ ಸೇವೆಗಾಗಿ, ಈಶ್ವರೀಯ ಸೇವೆಗಾಗಿ ಸಮರ್ಪಿಸಿದರು. ಈ ರೀತಿಯಾಗಿ ಕ್ರಿ.ಶ 1937 ರಲ್ಲಿ ‘ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ’ ಸ್ಥಾಪನೆಯಾ ಯಿತು. ಸುಮಾರು 14 ವರ್ಷಗಳವರೆಗೆ ಈಶ್ವರೀಯ ಜ್ಞಾನ ಮತ್ತು ದಿವ್ಯಗುಣಗಳ ಧಾರಣೆ ಮತ್ತು ಯೋಗದಲ್ಲಿ ಸ್ಥಿತರಾಗುವ ನಿರಂತರ ಅಭ್ಯಾಸ ಮಾಡಿದ ನಂತರ ಅರ್ಥಾತ್ ತಪಸ್ಸಿನ ನಂತರ ಕ್ರಿ.ಶ 1951 ರಲ್ಲಿ ಈ ಈಶ್ವರೀಯ ವಿಶ್ವ ವಿದ್ಯಾಲಯವು ರಾಜಸ್ಥಾನದ ಅಬುಪರ್ವತಕ್ಕೆ ಸ್ಥಳಾಂತರವಾಯಿತು. ಅಂದಿ ನಿಂದ ಇಂದಿನವರೆಗೂ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಸಹೋದರ-ಸಹೋದರಿಯರು ಇಡೀ ವಿಶ್ವದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಜನವರಿ 18, 1969 ರಲ್ಲಿ ಪಿತಾಶ್ರೀಯ ವರು ಅವ್ಯಕ್ತರಾದರು. ತಮ್ಮ ಸಂಪೂರ್ಣಾವಸ್ಥೆ ಯನ್ನು ಪಡೆ ದರು. ಅವರ ಅವ್ಯಕ್ತ ಸಹಯೋಗ ದಿಂದ ಈಶ್ವರೀಯ ಸೇವೆಯು ಮೊದಲಿಗಿಂ ತಲೂ ತೀವ್ರಗತಿಯನ್ನು ಪಡೆದು, ಇಂದು ವಿಶ್ವದಾದ್ಯಂತ ಸುಮಾರು 132 ರಾಷ್ಟ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ. ಸೂಕ್ಷ್ಮರೂಪದಿಂದ ಇಂದಿಗೂ ಪಿತಾಶ್ರೀಯವರು ಪ್ರತಿಯೊಬ್ಬರಿಗೂ ತಮ್ಮ ಜೊತೆಯ ಅನುಭವ ಮಾಡಿಸುತ್ತಾ ಹೆಜ್ಜೆ-ಹೆಜ್ಜೆಗೂ ಸಹಯೋಗ, ಸ್ನೇಹ ಮತ್ತು ಪ್ರೇರಣೆಯನ್ನು ನೀಡುತ್ತಿದ್ದಾರೆ. ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆಗಳನ್ನು ಧರಿಸಿದಂತೆ ಪಿತಾಶ್ರೀಯವರು ತಮ್ಮ ಹಳೆಯ ದೇಹವನ್ನು ತ್ಯಜಿಸಿ ಸೂಕ್ಷ್ಮ ಶರೀರಧಾರಿಯಾಗಿ ವಿಶ್ವಸೇವೆ ಮಾಡುತ್ತಿದ್ದಾರೆ. ಸೂಕ್ಷ್ಮ ಲೋಕ ನಿವಾಸಿಯಾಗಿ ಅವರು, ನಿತ್ಯ ಮಕ್ಕಳನ್ನು ಭೇಟಿ ಮಾಡುತ್ತಿದ್ದಾರೆ. ತಮ್ಮ ಛತ್ರಛಾಯೆಯ ಮೂಲಕ ಮಕ್ಕಳಿಗೆ ನಿರಂತರ ಸುರಕ್ಷಾ-ಕವಚವನ್ನು ನೀಡುತ್ತಾ ಬರುತ್ತಿದ್ದಾರೆ. ಇಂದು ಪಿತಾಶ್ರೀಯವರ 52ನೇ ಪುಣ್ಯತಿಥಿ ಯಾಗಿದೆ. ನಾವೆಲ್ಲರೂ ಆ ಅವ್ಯಕ್ತ ಆತ್ಮಕ್ಕೆ ನಮ್ಮ ಶ್ರದ್ಧಾಸುಮನಗಳನ್ನು ಅರ್ಪಿಸೋಣ.


ಬ್ರ.ಕು. ವಿಶ್ವಾಸ ಸೋಹೋನಿ
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್
ದಾವಣಗೆರೆ. ಮೊ. 9483937106

 

Leave a Reply

Your email address will not be published.