ಜಂಗಮ ಸೌಹಾರ್ದ ಸಹಕಾರಿ ಚುನಾವಣೆ ಪ್ರೊ. ವೀರಯ್ಯ ಗುಂಪಿಗೆ ಭರ್ಜರಿ ಜಯ

ದಾವಣಗೆರೆ,ಜ.17- ನಗರದ ಪ್ರತಿಷ್ಠಿತ ಕ್ರಿಡಿಟ್ ಕೋ-ಆಪರೇ ಟಿವ್ ಸೊಸೈಟಿಗಳಲ್ಲೊಂ ದಾದ ಜಂಗಮ ಸೌಹಾರ್ದ ಸಹಕಾರಿ ನಿಯಮಿತದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಪ್ರೊ. ಎಸ್.ಎಂ. ವೀರಯ್ಯ ಅವರ ನೇತೃತ್ವದ ಗುಂಪಿಗೆ ಭರ್ಜರಿ ಜಯ ಲಭಿಸಿದೆ.

ಆಡಳಿತ ಮಂಡಳಿಯ 11 ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದ ಪ್ರೊ. ಎಸ್.ಎಂ. ವೀರಯ್ಯ ಮತ್ತು ಪಿ.ಜಿ. ರಾಜಶೇಖರ್ ಅವರುಗಳ ಗುಂಪುಗಳ ನಡುವೆ ನಡೆದ ಪೈಪೋಟಿಯಲ್ಲಿ ತಮ್ಮ ಗುಂಪಿನಿಂದ ಸ್ಪರ್ಧಿಸಿದ್ದ ಎಲ್ಲಾ
10 ಸ್ಥಾನಗಳನ್ನೂ ಗೆಲ್ಲುವಲ್ಲಿ ಪ್ರೊ. ವೀರಯ್ಯ ಗುಂಪು ಯಶಸ್ವಿಯಾಗಿದೆ.

ವೀರಯ್ಯ ಅವರ ಗುಂಪಿ ನಿಂದ ಸ್ಪರ್ಧಿಸಿದ್ದ ವೀರಯ್ಯ ಅವರಲ್ಲದೇ, ಸಿ.ಎಂ. ಜಯ ದೇವಯ್ಯ, ಡಾ. ಎಲ್. ಎಂ. ಜ್ಞಾನೇಶ್ವರ, ಕೆ.ಎಂ. ಬಕ್ಕೇಶ್ವರ ಸ್ವಾಮಿ, ಬಿ.ಎಂ. ಚಂದ್ರಶೇಖರಯ್ಯ, ಎನ್.ಎಂ. ಬಸವ ರಾಜಯ್ಯ, ಇಂದೂಧರ ನಿಶಾನಿಮಠ, ವೀರಯ್ಯ ಬಸಯ್ಯ ಮಳೇಮಠ, ಶ್ರೀಮತಿ ಕೆ.ಎಸ್. ನಳಿನ, ಶ್ರೀಮತಿ ಜಿ.ಎಂ. ಪ್ರೇಮಾ ಅವರುಗಳು ಜಯ ಗಳಿಸಿದ್ದಾರೆ.

ಪಿ.ಜಿ. ರಾಜಶೇಖರ್ ಗುಂಪಿನಿಂದ ಸ್ಪರ್ಧಿಸಿದವರಲ್ಲಿ ಜೆ. ಕಿರಣ್ ಕುಮಾರ್ ಆಯ್ಕೆಯಾಗಿದ್ದಾರೆ. ಉಳಿದಂತೆ ಅವರ ಗುಂಪಿನ ಪಿ.ಜಿ. ರಾಜಶೇಖರ್ (161),  ಕೆ.ಎಂ. ಚನ್ನಬಸವಯ್ಯ (173), ದ್ರಾಕ್ಷಾಯಣಮ್ಮ (176), ಹೆಚ್. ವೀರಭದ್ರಯ್ಯ ಶಾಸ್ತ್ರಿ (167), ಬಿ.ಎಂ. ವೀರರಾಜೇಂದ್ರ ಸ್ವಾಮಿ (145), ಹೆಚ್.ಪಿ.ಸುರೇಶ್ (167), ಕೆ.ಎಂ. ಚಂದ್ರಮ್ಮ (167), ಎಂ.ಎಸ್. ಸಿದ್ದಯ್ಯ (160), ಜೆ.ಕೆ. ಅರುಣ್ ಕುಮಾರ್ (154) ಪರಾಭವಗೊಂಡಿದ್ದಾರೆ.

Leave a Reply

Your email address will not be published.