ಸಾಲಬಾಧೆ : ಮುದ್ದೇಬಿಹಾಳ ‌ರೈತ ಆತ್ಮಹತ್ಯೆ

ದಾವಣಗೆರೆ, ಸೆ.14- ಸಾಲ‌ ಬಾಧೆ ಹಿನ್ನೆಲೆಯಲ್ಲಿ  ಮುದ್ದೇಬಿಹಾಳ‌ದ ರೈತನೋರ್ವ ತಾಲ್ಲೂಕಿನ ಯರಗುಂಟೆ ಗ್ರಾಮದ ಕೊಂಡಜ್ಜಿ ರಸ್ತೆಯ‌ಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾ‌ಲ್ಲೂಕಿನ ಆಲೂರು ಗ್ರಾಮದ ಮಲ್ಲಣ್ಣ ಬಸಪ್ಪ ಬಿರಾದರ್ (45) ಆತ್ಮಹತ್ಯೆ ಮಾಡಿಕೊಂಡ ರೈತ. 4 ಎಕರೆ ಜಮೀನಿನಲ್ಲಿ ಅಣ್ಣ-ತಮ್ಮಂದಿರ ಜೊತೆ ವ್ಯವಸಾಯ ಮಾಡಿಕೊಂಡಿದ್ದರು. ನಾಲ್ಕು ವರ್ಷಗಳ ಹಿಂದೆ ಪತ್ನಿ ಮೃತಪಟ್ಟಿದ್ದು, ನೊಂದುಕೊಂಡಿದ್ದರು. ಜಮೀನಿ ನಲ್ಲಿ ಬೆಳೆ ಬೆಳೆಯಲು ಬ್ಯಾಂಕ್ ಒಂದರಲ್ಲಿ 80 ಸಾವಿರ ಸಾಲ ಮಾಡಿದ್ದು, ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ನಾಶವಾಗಿತ್ತು. ಬ್ಯಾಂಕ್ ಸಾಲ ತೀರಿಸಲಾಗದೇ ಮನನೊಂದ ಮಲ್ಲಣ್ಣ ರಸ್ತೆಯಲ್ಲಿ ವಿಷ ಕುಡಿದಿದ್ದರು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಲ್ಲಣ್ಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.