ಮಾಯಕೊಂಡದಲ್ಲಿ ಮುಖ್ಯಮಂತ್ರಿಗೆ ಜಯಘೋಷ

ಮಾಯಕೊಂಡದಲ್ಲಿ ಮುಖ್ಯಮಂತ್ರಿಗೆ ಜಯಘೋಷ

ಮಾಯಕೊಂಡ, ಜ.14- ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿ ಮತ್ತು ಪುರ ಅಭಿವೃದ್ಧಿ ಕ್ರಿಯಾಶೀಲ ವೇದಿಕೆ ಸದಸ್ಯರೆಲ್ಲರೂ ಊರಿನ ವೃತ್ತದಲ್ಲಿ ಸಭೆ ಸೇರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನ ವರಿಗೆ ಮತ್ತು ಬಿ.ವೈ. ವಿಜಯೇಂದ್ರ ಅವರಿಗೆ ಜಯಘೋಷ ಹಾಕಿದರು.

ಮಾಯಕೊಂಡ ಮತ್ತು ಚಿತ್ರದುರ್ಗದ ಧರ್ಮಪುರ ಹೆಸರುಗಳು ತಾಲ್ಲೂಕು ಕೇಂದ್ರವಾಗಲು ಅಂಕಿತ ಪಡೆದುಕೊಳ್ಳುವುದಕ್ಕಾಗಿ ಮುಖ್ಯಮಂತ್ರಿಯವರ ಕಚೇರಿಗೆ ಬಂದಿದೆ ಎಂಬ ಅಂಶವನ್ನು ಕೇಳಿ ನೂರಾರು ಜನತೆ ಪುಳಕಿತರಾಗಿ ಜಯಘೋಷ ಹಾಕಿದರು.

ಸಭೆಯಲ್ಲಿ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ, ಎಸ್.ಆರ್. ಗೋವಿಂದರಾಜು, ಜಿ.ಎಂ. ಬಸವರಾಜಪ್ಪ, ಜಿ.ಹೆಚ್. ಪ್ರಕಾಶಪ್ಪ, ಗುಡ್ಲು ಹನುಮಂತಪ್ಪ, ಪಟ್ಟಣಶೆಟ್ಟಿ ಶೇಖರಪ್ಪ, ಕೆ.ಎಂ. ಮುರುಗೇಶಪ್ಪ, ಬೀರಲಿಂಗಪ್ಪ, ನಾಗರಾಜಚಾರ್, ತರಗಾರ ಅಂಜನಪ್ಪ, ಮುದ್ದೇರ ನಿಂಗಣ್ಣ, ಪರಕೆ ಆನಂದಪ್ಪ, ಅಂಗಡಿ ಮಲ್ಲಿಕಾರ್ಜುನಪ್ಪ ಇನ್ನಿತರರಿದ್ದರು.

Leave a Reply

Your email address will not be published.