ಮನೆಗಳ್ಳತನ : ಚಿನ್ನಾಭರಣ ಕಳವು

ದಾವಣಗೆರೆ, ಜ.14- ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, 63 ಸಾವಿರ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ಇಲ್ಲಿನ ನಿಟುವಳ್ಳಿ ಹೊಸ ಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಬಡಾವಣೆಯ ವಾಸಿ ಶಬಾನಾ ಬೇಗಂ ಅವರ ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ 50 ಸಾವಿರ ನಗದು, 8 ಸಾವಿರ ಮೌಲ್ಯದ ಚಿನ್ನದ ಗುಂಡು, 5 ಸಾವಿರ ಮೌಲ್ಯದ ಬೆಳ್ಳಿಯ ಕಾಲು ಚೈನ್ ಅನ್ನು ಕಳ್ಳರು ದೋಚಿದ್ದಾರೆ. ಈ ಸಂಬಂಧ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.