ಕೊಮಾರನಹಳ್ಳಿಯಲ್ಲಿ ಹನುಮಪ್ಪನಿಗೆ ನೋಟಿನ ಅಲಂಕಾರ

ಕೊಮಾರನಹಳ್ಳಿಯಲ್ಲಿ ಹನುಮಪ್ಪನಿಗೆ ನೋಟಿನ ಅಲಂಕಾರ

ಮಲೇಬೆನ್ನೂರು, ಜ.14 – ಕೊಮಾರನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧನುರ್ಮಾಸದ ಅಂಗವಾಗಿ ಕಳೆದ ಒಂದು ತಿಂಗಳಿನಿಂದ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಮಾಡಿಕೊಂಡು ಬಂದಿದ್ದ ಅರ್ಚಕ ಶ್ರೀನಿವಾಸಚಾರ್ ಮತ್ತು ಅವರ ಮಕ್ಕಳಾದ ಧನಂಜಯ, ರಂಗನಾಥ್, ವರದಾ ಅವರು ಸಂಕ್ರಾಂತಿ ಹಬ್ಬದ ಅಂಗವಾಗಿ ಗುರುವಾರ ಸ್ವಾಮಿಗೆ 500, 100, 20,10 ರೂಪಾಯಿಗಳ ಹೊಸ ನೋಟುಗಳಿಂದ ಅಲಂಕಾರ ಮಾಡಿ ಗಮನ ಸೆಳೆದರು. ಅಲ್ಲದೇ, ದೇವಸ್ಥಾನದಲ್ಲಿ ಸಮಸ್ತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಪೊಂಗಲ್ ವಿತರಣೆ: ಇಲ್ಲಿನ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲೂ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕವನ್ನು ನೆರವೇರಿಸಿ ಭಕ್ತರಿಗೆ ಪೊಂಗಲ್ ಪ್ರಸಾದವನ್ನು ವಿತರಿಸಲಾಯಿತು. 

ಮಲೇಬೆನ್ನೂರು ಪಟ್ಟಣದ ಗ್ರಾಮದೇವತೆ ಶ್ರೀ ಏಕನಾಥೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ಮಾಡಿ ಪೊಂಗಲ್ ವಿತರಣೆ ಮಾಡಿದರು.

Leave a Reply

Your email address will not be published.