ಹೆಲ್ಪ್ ಲೈನ್ ಸುಭಾನ್‌ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಸನ್ಮಾನ

ದಾವಣಗೆರೆ, ಜ.12- ಹೆಲ್ಪ್ ಲೈನ್ ಸುಭಾನ್ ಎಂದೇ ಹೆಸರಾಗಿರುವ ನಗರದ ಸಾಮಾಜಿಕ ಸೇವಾ ಕಾರ್ಯಕರ್ತ ಆರ್.ಡಿ. ಸುಭಾನ್ ಸಾಬ್ ನದಾಫ್ ಅವರ ಸಾಮಾಜಿಕ ಕಳಕಳಿ, ಸೇವೆಯನ್ನು ಗುರ್ತಿಸಿ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರಶಂಸನೀಯ ಪತ್ರ ನೀಡಿ ಸನ್ಮಾನಿಸಲಾಗಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿನ ಅನೇಕ ಅಪಘಾತ ಮತ್ತು ಇನ್ನಿತರೆ ಅನಾಹುತಗಳು ಸಂಭವಿಸಿದ ಸಮಯದಲ್ಲಿ ಸ್ಥಳಕ್ಕೆ ತೆರಳಿ ಅವರ ಜೀವ ರಕ್ಷಿಸಿ, ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಪ್ರಾಣಾಪಾಯದಿಂದ ಕಾಪಾಡಿರುವುದಲ್ಲದೆ, ಸಂಕಷ್ಟದ ವೇಳೆ ಅವರು ರಕ್ತ ದಾನ ಮಾಡಿದ್ದಾರೆ. 46 ಬಾರಿ ರಕ್ತದಾನ ಮಾಡಿ ರಾಜ್ಯ ಸರ್ಕಾರದಿಂದ ಜೀವ ರಕ್ಷಕ ಪ್ರಶಸ್ತಿ ಪಡೆದಿದ್ದಾರೆ. 

ನಿರ್ಗತಿಕರಿಗೆ ಮತ್ತು ಅಸಹಾಯಕರಿಗೆ ಹೊದಿಕೆ, ಹಾಸಿಗೆ ಹಾಗೂ ಉಡಲು ಬಟ್ಟೆ ಮತ್ತು ಆಹಾರ ಸಾಮಗ್ರಿಗಳನ್ನು ಹಂಚಿಕೆ ಮಾಡಿರುತ್ತಾರೆ. ಅವರ ಸಮಾಜ ಸೇವೆಯನ್ನು ಪರಿಗಣಿಸಿ ಹಾಗೂ ಇಲಾಖೆಯೊಂದಿಗೆ ಕೈ ಜೋಡಿಸಿ ಇತರರಿಗೆ ಮಾದರಿಯಾಗಿರುವುದನ್ನು ಗುರ್ತಿಸಿ, ಸನ್ಮಾನಿಸಲಾಗುತ್ತಿದೆ ಎಂದು ಪ್ರಶಂಸನೀಯ ಪತ್ರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ತಿಳಿಸಿದ್ದಾರೆ.

Leave a Reply

Your email address will not be published.