ಶಿಕ್ಷಕನ ಮನೆಯಲ್ಲಿ ಕಳ್ಳತನ : ಚಿನ್ನ, ನಗದು ಕಳವು

ದಾವಣಗೆರೆ, ಜ.12- ಶಿಕ್ಷಕರೋರ್ವರ ಮನೆಯಲ್ಲಿ ಕಳ್ಳತನ ನಡೆದಿದ್ದು, 2 ಲಕ್ಷದ 3 ಸಾವಿರ ಮೌಲ್ಯದ 37 ಗ್ರಾಂ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ತಾಲ್ಲೂಕಿನ ಬಸವನಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ಹಾಡಹಗಲೇ ನಡೆದಿದೆ. ನೇರ್ಲಿಗೆ ಗ್ರಾಮದಲ್ಲಿ ಶಿಕ್ಷಕರಾಗಿರುವ ಮಲ್ಲೇಶನಾಯ್ಕ ಕೆಲಸಕ್ಕೆ ಹೋಗಿದ್ದರು. ಅವರ ತಾಯಿ ಮತ್ತು ಮಗಳು ಹೊಲದಲ್ಲಿ ನಾಟಿ ಮಾಡಲು ಹೋಗಿದ್ದರು. 

ಮನೆ ಸಮೀಪವೇ ಕೀಲಿ ಇಟ್ಟಿದ್ದನ್ನು ಗಮನಿಸಿದವರೇ ಈ ಕೃತ್ಯ ಎಸಗಿದ್ದಾರೆ ಎನ್ನ ಲಾಗಿದೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.