ಕೊಟ್ಟೂರು ನಗರ ಬಿಜೆಪಿ ಅಧ್ಯಕ್ಷರಾಗಿ ವಿಕ್ರಮ್

ಕೊಟ್ಟೂರು, ಜ.12- ಕೊಟ್ಟೂರು ನಗರ ಘಟಕದ ಬಿಜೆಪಿ ಅಧ್ಯಕ್ಷರಾಗಿ ಭರಮನಗೌಡ್ರು ರಾಮನಗೌಡ್ರು ವಿಕ್ರಮ್ ಅವರು ಆಯ್ಕೆಯಾಗಿದ್ದಾರೆ.

ಸೋಮವಾರ ಸಂಜೆ ಕೊಟ್ಟೂರು ಪ್ರವಾಸಿ ಮಂದಿರದಲ್ಲಿ ನಡೆದ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಬಿ.ಆರ್.ವಿಕ್ರಮ್ ಅವರ ಆಯ್ಕೆಯನ್ನು ಮಂಡಲ ಅಧ್ಯಕ್ಷ ವಿಜಯಕುಮಾರ್ ಸ್ವಾಮಿ ಅವರು ಘೋಷಿಸಿದರು.

ಸದಸ್ಯ ಕೊಟ್ಟೂರು ಕಾಟನ್ ಜೆಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಆರ್.ವಿಕ್ರಮ್  ಅವರು, ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಎಂ.ಎಂ.ಜೆ.ಸ್ವರೂಪಾನಂದ, ಪ.ಪಂ.ಸದಸ್ಯರಾದ ಬೋರ್‌ವೆಲ್ ತಿಪ್ಪೇಸ್ವಾಮಿ, ಗಂಗನಳ್ಳಿ ಸಿದ್ದಯ್ಯ, ಹೊಸಮನಿ ಮಲ್ಲಿಕಾರ್ಜುನ, ಭರಮಗೌಡ ಪಾಟೀಲ್, ಮರಬದ ನಾಗರಾಜ್, ಉಮಾಪತಿ, ಕೊಟ್ರೇಶ್ ಕಾಮಶೆಟ್ಟಿ, ಅಡಿಕಿ ಮಂಜುನಾಥ್, ರಾಘವೇಂದ್ರ ಮತ್ತಿತರರಿದ್ದರು.

Leave a Reply

Your email address will not be published.