ಅಮೆರಿಕದ ಅಪಘಾತದಲ್ಲಿ ಮೃತಪಟ್ಟ ಯುವತಿಯ ಅಸ್ಥಿ ನಾಳೆ ನಗರಕ್ಕೆ

ದಾವಣಗೆರೆ, ಜ.12- ಕಳೆದ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಗರದ ಸೌಮ್ಯ ಅವರ ಅಸ್ಥಿಯನ್ನು  ನಾಡಿದ್ದು ದಿನಾಂಕ 14 ರ ಗುರುವಾರ ನಗರಕ್ಕೆ ತರಲಾಗುತ್ತಿದೆ.

ದಾವಣಗೆರೆ ನಿವೃತ್ತ ರೈಲ್ವೆ ಸ್ಟೇಷನ್ ಮೇನೇಜರ್ ಹೆಚ್.ಜಿ‌.ಮುರಿಗೇಂದ್ರಪ್ಪ ಅವರ ಹಿರಿಯ ಪುತ್ರಿ ಇಂಜಿನಿಯರ್ ಸೌಮ್ಯ (29) ಅವರು ಪತಿ ನಿರಂಜನ್ ಅವರೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದು, ವರ್ಷಾಂತ್ಯದ ರಜೆಯಲ್ಲಿ
ಹವಾಯಿ ದ್ವೀಪಕ್ಕೆ ತೆರಳಿ ವಿಹರಿಸುತ್ತಿರುವಾಗ, ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಮೃತರ ಅಂಗಾಂಗಳನ್ನು ದಾನ ಮಾಡಲಾಗಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲು ಸಾಧ್ಯವಾಗಲಿಲ್ಲ. ಇದೀಗ ಮೃತ ಸೌಮ್ಯ ಅವರ ಪತಿ ನಿರಂಜನ್ ಅವರು ಅಸ್ಥಿಯನ್ನು ನಾಡಿದ್ದು ಗುರುವಾರ ತರುತ್ತಿದ್ದು, ತರಳಬಾಳು ಬಡಾವಣೆಯಲ್ಲಿರುವ ಮುರಿಗೇಂದ್ರಪ್ಪನವರ ಮನೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಪೂಜೆ ನಂತರ ಅಂತಿಮ ವಿಧಿ-ವಿಧಾನಗಳಿಗಾಗಿ ಮೃತರ ಪತಿಯ ಊರಾದ ಕಡೂರು ತಾಲ್ಲೂಕಿನ ಕೆದಿಗೆರೆ ಗ್ರಾಮಕ್ಕೆ ಒಯ್ಯಲಾಗುವುದು ಎಂದು ಸೌಮ್ಯ ಅವರ ಕಿರಿಯ ಸಹೋದರಿ ಕಾವ್ಯ ತಿಳಿಸಿದ್ದಾರೆ‌.

Leave a Reply

Your email address will not be published.