ಹೊಯ್ಸಳದಿಂದ ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಮಗನ ರಕ್ಷಣೆ

ದಾವಣಗೆರೆ, ಜ.11- ಕೌಟುಂಬಿಕ ಸಮಸ್ಯೆ ಹಿನ್ನೆಲೆಯ ನದಿ ಬಳಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮತ್ತು ಮಗನನ್ನು ರಕ್ಷಿಸುವಲ್ಲಿ ಮಲೇಬೆನ್ನೂರಿನ ತುರ್ತು ಸ್ಪಂದನಾ ವ್ಯವಸ್ಥೆ-112  (ಹೊಯ್ಸಳ) ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಗುಂಡಿಮಡು ಗ್ರಾಮದ ಅಶ್ವಿನಿ ಎಂಬಾಕೆ ತನ್ನ 6 ವರ್ಷದ ಮಗ ಲೋಹಿತ್‍ನೊಂದಿಗೆ ಉಕ್ಕಡಗಾತ್ರಿಗೆ ಪೂಜೆಗೆ ಬಂದು ವಾಪಸ್ಸು ಮರಳುವಾಗ ಇಂದು ಸಂಜೆ ಹರಿಹರದ ತುಂಗಭದ್ರಾ ನದಿ ಸೇತುವೆ ಬಳಿ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎನ್ನಲಾಗಿದೆ.

ಅನುಮಾನಗೊಂಡ ಸ್ಥಳೀಯರಾದ ಹಲಸಬಾಳು ಬಾರಿಕೇರ ರೇವಣಪ್ಪ, ಪುಟಗ ನಾಳ್‍ನ ಶಂಕರಪ್ಪ ಎಂಬುವರು ತುರ್ತು ಸ್ಪಂದನಾ ವ್ಯವಸ್ಥೆ-112ರ ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷಣ ಕಾರ್ಯ ಪ್ರವೃತ್ತರಾದ ಮುಖ್ಯ ಪೇದೆ ರಮೇಶ್, ವಾಹನ ಚಾಲಕ ಬಸವರಾಜ್ ಸ್ಥಳಕ್ಕಾಗಮಿಸಿ ತಾಯಿ-ಮಗನನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ. ನಂತರ ಸಂಬಂಧಿಗಳನ್ನು ಕರೆಸಿ ಸಮಾಧಾನಪಡಿಸಿ ಕಳುಹಿಸಿಕೊಡಲಾಗಿದೆ. 

Leave a Reply

Your email address will not be published.