ವಿವೇಕಾನಂದರ ಆದರ್ಶ ತತ್ವ ಯುವಕರಿಗೆ ಸ್ಫೂರ್ತಿದಾಯಕ

ವಿವೇಕಾನಂದರ ಆದರ್ಶ ತತ್ವ ಯುವಕರಿಗೆ ಸ್ಫೂರ್ತಿದಾಯಕ

ಹರಿಹರ, ಜ. 11- ಅಧ್ಯಾತ್ಮದ ತಳಹದಿ ಮೇಲೆ ದೇಶದ ಸಂಸ್ಕೃತಿ ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಯುವಕರಿಗೆ ಸ್ಫೂರ್ತಿದಾಯಕವಾಗಿವೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು. 

ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಣೆಯ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಆಶ್ರಯದಲ್ಲಿ ಜರುಗಿದ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು, ಯುವಕರು ಮುಖ್ಯವಾಗಿ ಸಮಯಪ್ರಜ್ಞೆ ಕಲಿಯಬೇಕು. ಸತತ ಅಭ್ಯಾಸ ಇಲ್ಲದಿದ್ದರೆ  ಯಶಸ್ಸು ಸಾಧ್ಯವಿಲ್ಲ.ಇಚ್ಛಾಶಕ್ತಿ, ಕ್ರಿಯಾ ಶಕ್ತಿಗಳನ್ನು ಜೀವನದಲ್ಲಿ ಕಾರ್ಯ ರೂಪಕ್ಕೆ ತಂದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ವಿವೇಕಾನಂದರ ಉನ್ನತ ಅಂಶಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಮನಸ್ಸುಗ ಳನ್ನು ಹತೋಟಿಯಲ್ಲಿಟ್ಟುಕೊಂಡು ಏಕಾಗ್ರತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಾಧನೆಯತ್ತ ದೃಷ್ಟಿ ಹರಿಸಬಹುದು ಎಂದು ಹರೀಶ್ ಹೇಳಿದರು

ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ ಶ್ರೀ ರಾಮಕೃಷ್ಣ ಪರಮಹಂಸರು ಶ್ರೀ ಸ್ವಾಮಿ ವಿವೇಕಾನಂದರು ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಇಡೀ ದೇಶವನ್ನೇ ಕಾಲ್ನಡಿಗೆ ಯಲ್ಲಿ ಸುತ್ತಿ ದೇಶವನ್ನು ಸರಿಯಾಗಿ ಅಧ್ಯಯನ ಮಾಡಿದ್ದಾರೆ. ಭಾರತ ದೇಶದ ಸಂಸ್ಕೃತಿ ಪರಂಪರೆ ಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿ ದ್ದಾರೆ. ಸ್ವಾಮಿ ವಿವೇಕಾನಂದರ ಮಹತ್ತರವಾದ ಉಪ ದೇಶಗಳು ನಮ್ಮ ಪಾಲಿಗೆ ದಾರಿ ದೀಪಗಳಾಗಿವೆ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ನಮ್ಮ ದೇಶದ ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯಕ್ಕೆ ಯುವಪಡೆ ಮುಂದಾಗಬೇಕೆಂದು ಕರೆ ನೀಡಿದರು. 

ಮಹಾತ್ಮ ಗಾಂಧಿ ಮೈದಾನದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು, ರಾಜ- ಬೀದಿಗಳಲ್ಲಿ ಸಂಚರಿಸಿ ವಿವೇಕಾನಂದರ ವಾಣಿ, ಘೋಷಣೆಗಳನ್ನು ಹಾಕಲಾಯಿತು. 

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರುಗ ಳಾದ ಎನ್ ರಜನಿಕಾಂತ್, ವಿಜಯಕುಮಾರ್, ಹನುಮಂತಪ್ಪ ಆಟೋ,  ನೀತಾ ಮೆಹರ್ವಾಡೆ, ಅಶ್ವಿನಿ ಕೃಷ್ಣ, ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಆನಂದಕುಮಾರ್, ರಾಘವೇಂದ್ರ, ಮಾರುತಿ ಶೆಟ್ಟಿ, ಮಂಜು ನಾಯ್ಕ ಆರ್ .ಬಿ. ಪ್ರವೀಣ್, ತುಳಜಪ್ಪ ಭೂತೆ,  ರವಿ ರಾಯ್ಕರ್,  ಸಂತೋಷ ಗುಡಿಮನಿ, ರವಿ ರಾಜ್, ಕಿರಣ್, ಜಿ.ಎಂ.ಪ್ರಶಾಂತ್ ಕುಮಾರ್, ಶಾಂತಕುಮಾರ್, ಬಾತಿ ಚಂದ್ರಶೇಖರ್, ರವಿ ರಾಜ್ ಗುರು, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂತೋಷಿ ಮೋಹಿತೆ, ರೂಪ ಶಶಿಕಾಂತ್, ನಗರಸಭೆಯ ಮಾಜಿ ಉಪಾಧ್ಯಕ್ಷೆ ಅಂಬುಜಾ ಬಾಯಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

Leave a Reply

Your email address will not be published.