ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿ ರುವ ನೂತನ ಅನುಭವ ಮಂಟಪದ ಜಾಹೀರಾತಿನಲ್ಲಿ 'ಸನಾತನ' ಎಂಬ ಪದದ ಬಳಕೆಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ಮಲೇಬೆನ್ನೂರು : ಲಾರಿ ತಿವಿದು ವ್ಯಕ್ತಿ ಸಾವು
ಮಲೇಬೆನ್ನೂರು : ಇಲ್ಲಿನ ಪುರಸಭೆ ಕಚೇರಿ ಮುಂಭಾಗ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಲಾರಿ ತಿವಿದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟುಬಿದ್ದ ಕಾರಣ ನೆಹರು ನಗರ ವಾಸಿ ಬಿಳಸನೂರು ಮಂಜುನಾಥ್ ಎಂಬಾತ ಸ್ಥಳದಲ್ಲಿಯೇ ಸಾವ ನ್ನಪ್ಪಿದ್ದಾರೆ.
ನಡಿಗೆ ಜಾಥಾದಲ್ಲಿ ಮಹಿಳಾ ತಂಡ
ನಗರದಿಂದ ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನದವರೆಗೂ ಕುಂದುವಾಡ ಕೆರೆ ವಾಯು ವಿಹಾರಿ ಬಳಗ ದವರು ಮೊನ್ನೆ ಹಮ್ಮಿಕೊಂಡಿದ್ದ ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದ ಮಹಿಳಾ ತಂಡ.
ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಜಿಲ್ಲಾ ಕಾಂಗ್ರೆಸ್ನಿಂದ ಧರಣಿ
ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರ ಪಾಲಿಕೆ ಮುಂಭಾಗದಲ್ಲಿ ಧರಣಿ ಹೂಡಿದ್ದ ಪ್ರತಿಭಟನಾ ನಿರತರು, ಕೊರೊನಾ ಸಂದರ್ಭದಲ್ಲೂ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಸ್ಪಿ ಬಸವರಾಜ್- ಮುಖ್ಯಪೇದೆ ರಾಮಚಂದ್ರಗೆ ರಾಷ್ಟ್ರಪತಿ ಪದಕ
ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆಯನ್ನು ಪರಿಗಣಿಸಿ ನೀಡಲಾಗುವ 2019 ರ ರಾಷ್ಟ್ರಪತಿ ಪದಕಕ್ಕೆ ಜಿಲ್ಲಾ ಪೊಲೀಸ್ ನ ಡಿಸಿಆರ್ ಬಿ ಡಿವೈಎಸ್ಪಿ ಬಿ.ಎಸ್. ಬಸವರಾಜ್ ಮತ್ತು ಜಿಲ್ಲಾ ಪೊಲೀಸ್ ಕಚೇರಿ ಗಣಕ ಯಂತ್ರ ವಿಭಾಗದ ಹೆಡ್ ಕಾನ್ಸ್ ಟೇಬಲ್ ರಾಮಚಂದ್ರ ಬಿ. ಜಾಧವ್ ಭಾಜನರಾಗಿದ್ದಾರೆ.
ಹಸಿವಿಗೆ ಅನ್ನ ಎಷ್ಟು ಮುಖ್ಯವೋ, ಸಾಕ್ಷರತೆಯ ಅರಿವು ಕೂಡ ಅಷ್ಟೇ ಮುಖ್ಯ
ಹರಪನಹಳ್ಳಿ : ಹಸಿವಿಗೆ ಅನ್ನ ಎಷ್ಟು ಮುಖ್ಯವೋ ಸಾಕ್ಷರತೆಯ ಅರಿವು ಅಷ್ಟೇ ಮುಖ್ಯ. ಪುಲೆ ದಂಪತಿ ಅಂದು ಹಚ್ಚಿದ ಸಾಕ್ಷರತಾ ಜ್ವಾಲೆ ನಿರಂತರವಾಗಿ ಬೆಳಗುತ್ತಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಬಸವರಾಜ್ ಸಂಗಪ್ಪನವರ್ ಹೇಳಿದರು.
ಸ್ವಂತ ಕಟ್ಟಡದೊಂದಿಗೆ ಪ್ರಗತಿಯ ಮುಂಚೂಣಿಯ ಹೆಗ್ಗಳಿಕೆಯಲ್ಲಿ ಕರಾವಳಿ ಸೌಹಾರ್ದ ಸಹಕಾರಿ
ಸಹಕಾರಿ ಸಂಘವೊಂದು ಕೋಟ್ಯಾಂತರ ರೂ. ಮೌಲ್ಯದ ಸ್ವಂತ ಕಟ್ಟಡ ಹೊಂದಿ ಪ್ರಗತಿಯ ಮುಂಚೂಣಿಯಲ್ಲಿರುವ ಏಕೈಕ ಸಹಕಾರಿ ಎಂಬ ಹೆಗ್ಗಳಿಕೆಗೆ ನಗರದ ಕರಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಪಾತ್ರವಾಗಿದೆ
ಹಿರಿಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ರಚನೆ
ಶ್ರೀ ಜಯದೇವ ವೃತ್ತದ ಬಳಿಯ ಕಾರಿಗನೂರು ಪರಮೇಶ್ವರಪ್ಪ ಕಾಂಪ್ಲೆಕ್ಸ್ ನಲ್ಲಿ ಹಿರಿಯ ಪತ್ರಕರ್ತರಾದ ಎಸ್.ಬಿ.ಜಿನದತ್ತ ಹಾಗೂ ಬಕ್ಕೇಶ್ ನಾಗನೂರು ಅವರುಗಳ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಹಿರಿಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು.
ನಗರದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಮಹಾಂತೇಶ ಪಾಟೀಲ್
ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಮಹಾಂತೇಶ ಪಾಟೀಲ್ ನಗರಕ್ಕೆ ಆಗಮಿಸಿದ್ದರು.
ಜೋಳದ ರಾಶಿ ಗುಡ್ಡದ ಮೇಲೆ ಶ್ರೀ ಕೃಷ್ಣದೇವರಾಯನ ಪ್ರತಿಮೆ ಸೂಕ್ತ
ಕೊಟ್ಟೂರು : ಹೊಸಪೇಟೆಯ ಜೋಳದ ರಾಶಿ ಗುಡ್ಡದ ಮೇಲೆ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ಪ್ರತಿಮೆ ಸ್ಥಾಪಿಸುವುದು ಸೂಕ್ತ ಎಂದು ಕೊಟ್ಟೂರಿನ ನಮ್ಮ ಕೆರೆ ನಮ್ಮ ಹಕ್ಕು ಸಂಚಾಲಕ ಅಂಚೆ ಕೊಟ್ರೇಶ್ ತಿಳಿಸಿದರು.