ಹರಿಹರ : ಸಾಯಿ ಮಂದಿರದಲ್ಲಿ ಪೂಜೆ

ಹರಿಹರ : ಸಾಯಿ ಮಂದಿರದಲ್ಲಿ ಪೂಜೆ

ಹರಿಹರ, ಜ.7- ಸ್ಥಳೀಯ ಕೇಶವ ನಗರದ ಪಟೇಲ್ ಬಡಾವಣೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ಧನುರ್ ಮಾಸ ನಿಮಿತ್ತ ಶ್ರೀ ಸಾಯಿಬಾಬಾ, ಸಿದ್ಧಿವಿನಾಯಕ, ಕಾಶಿ ವಿಶ್ವನಾಥ ಮತ್ತು ಬಸವಣ್ಣ ಸ್ವಾಮಿಗೆ ಬೆಳಿಗ್ಗೆ ಅಭಿಷೇಕ,  ಹಾಗೂ ಆಶ್ಲೇಷ ಬಲಿ, ಸರ್ಪ ಶಾಂತಿ ಹಾಗೂ ಮೃತ್ಯುಂಜಯ ಹೋಮ ಹಾಗು ಇನ್ನಿತರೆ  ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಹಾಮಂಗಳಾರತಿ  ನಂತರ ಪ್ರಸಾದ ವಿನಿಯೋಗ ನಡೆಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಬಸವರಾಜ್ ಪಟೇಲ್, ಹನುಮಂತಪ್ಪ ಸುರ್ವೇ, ಸಂಗನಾಳಮಠ, ಸರಪದ, ಅರ್ಚಕ ಕುಮಾರಸ್ವಾಮಿ, ಲಿಂಗರಾಜ್ ಪಟೇಲ್, ಮಹದೇವಪ್ಪ ಇನ್ನಿತರರಿದ್ದರು.

Leave a Reply

Your email address will not be published.