ಅಪಘಾತ : ನಗರದ ಯುವತಿ ಸಾವು

ದಾವಣಗೆರೆ,ಜ.7- ಶಿವಮೊಗ್ಗ ಜಿಲ್ಲೆ ಹೊಸನಗರದ ಬಳಿಯ ನಗರದಲ್ಲಿ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಸ್ಥಳೀಯ ನೂಪುರ ನೃತ್ಯ ಶಾಲೆಯ ಶಿಕ್ಷಕಿ ಶ್ರೀಮತಿ ಬೃಂದಾ ಮತ್ತು ಶ್ರೀನಿವಾಸ್ ದಂಪತಿ ಪುತ್ರಿ ಕು. ಚಿನ್ಮಯಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಚಿನ್ಮಯಿಗೆ ಸುಮಾರು 21 ವರ್ಷ ವಯಸ್ಸಾಗಿತ್ತು.

ಚಿನ್ಮಯಿ ಮತ್ತು ಆಕೆಯ ತಾಯಿ – ತಂದೆ, ಸಹೋದರಿ ಎಲ್ಲಾ ನಾಲ್ವರೂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ ದಾವಣಗೆರೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಅಪಘಾತದಲ್ಲಿ ಚಿನ್ಮಯಿ ಘಟನಾ ಸ್ಥಳದಲ್ಲೇ ಅಸುನೀಗಿದರೆ, ಆಕೆಯ ತಂದೆ ಶ್ರೀನಿವಾಸ್, ತಾಯಿ ಬೃಂದಾ ಮತ್ತು ಸಹೋದರಿ ಲಾಸ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಮೃತ ಚಿನ್ಮಯಿ ಪಾರ್ಥಿವ ಶರೀರವನ್ನು ದಾವಣಗೆರೆಗೆ ತರಲಾಗುತ್ತಿದ್ದು, ನಾಳೆ ದಿನಾಂಕ 8ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವೈಕುಂಠಧಾಮದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು.

ಚಿನ್ಮಯಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್, ಚಿನ್ಮಯಿ ಪ್ರತಿಭಾವನ್ವಿತ ಭರತ ನಾಟ್ಯ ಕಲಾವಿದೆಯಾಗಿದ್ದು, ಹಲವಾರು ಪ್ರಶಸ್ತಿ ಮತ್ತು ಸನ್ಮಾನಕ್ಕೆ ಭಾಜನರಾಗಿದ್ದರು ಎಂದು ಸ್ಮರಿಸಿದ್ದಾರೆ.

Leave a Reply

Your email address will not be published.