ಹರಪನಹಳ್ಳಿ : ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯಕಾರಿಣಿ ಸಭೆ

ಹರಪನಹಳ್ಳಿ : ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯಕಾರಿಣಿ ಸಭೆ

ಹರಪನಹಳ್ಳಿ, ನ.28- ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶಾಸಕರು ಬದ್ಧರಾಗಿದ್ದು, ಅವರ ಅನುದಾನದಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯ ಸೇರಿದಂತೆ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಾಲ್ಲೂಕು ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಎಂ.ಕೆ. ಜಾವೀದ್ ಹೇಳಿದರು.

ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಇಬ್ರಾಹಿಂ ಬಾಬು ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಸಾಬ್, ಬಾವಳ್ಳಿ ಸಿರಾಜ್ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಬಿ. ಮೆಹಬೂಬ್ ಸಾಬ್, ಮುಖಂಡರಾದ ಬಾಗಳಿ ಕೊಟ್ರೇಶಪ್ಪ ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಮಾತನಾಡಿದರು.

ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅತೀಕ್ ಅಹಮ್ಮದ್, ಬಡಗಿ ರಹಮತ್‌ವುಲ್ಲಾ, ಮುಖಂಡರಾದ ಡಿ. ಅಬ್ದುಲ್ ರಹಿಮಾನ್, ತೆಲಿಗಿ ಶಫಿವುಲ್ಲಾ, ಡಿ.ಎಂ. ಫಜಲ್, ಗುಂಡಿನಕೇರಿ ಸತ್ತರ್, ಪಠಾಣಗೆರೆ ಫೈರೋಜ್, ತೆಕ್ಕದ ಗರಡಿಕೇರಿ ಚಾಂದುಬಾಷಾ, ಕುಂಚೂರು ಶಫಿಸಾಬ್, ನಂದಿಬೇವೂರು ಶಫಿ, ಹೊಂಬಳಗಟ್ಟಿ ಮೆಹಬೂಬ್ ಇನ್ನಿತರರಿದ್ದರು.

Leave a Reply

Your email address will not be published.