ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹರಿಹರ, ನ.29- ಬೆಸ್ಕಾಂನಿಂದ ಗುತ್ತಿಗೆ ಆಧಾರಿತ ಕೆಲಸಗಾರರು ವಿದ್ಯುತ್ ಕಂಬವನ್ನು ಬದಲಾಯಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ಇಬ್ಬರಿಗೂ ತಗುಲಿ ಓರ್ವ ಮೃತಪಟ್ಟ ಘಟನೆ ಇಲ್ಲಿನ ಕೇಶವ ನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ. 

ಕಂಬ ಬದಲಾಯಿಸುವ ಕೆಲಸದಲ್ಲಿ ನಿರತರಾದಾಗ ಪವರ್ ಸಪ್ಲೈ ಆಗಿ ತಕ್ಷಣ ಕೆಲಸದಲ್ಲಿ ನಿರತರಾದ ಇಬ್ಬರಿಗೆ ವಿದ್ಯುತ್ ಸ್ಪರ್ಶವಾಗಿ ಕಂಬ ಮತ್ತು ವಿದ್ಯುತ್ ತಂತಿಗಳ ಮೇಲೆ ಇಬ್ಬರು ವ್ಯಕ್ತಿಗಳು  ಜೋತಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ  ಹರಿದಾಡಿದೆ. 

ಬೆಸ್ಕಾಂ ಅಧಿಕಾರಿಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಕರೆ ಮಾಡಿದರೂ ಸಹ ಇತ್ತ ಗಮನ ಹರಿಸಲಿಲ್ಲ. 

ಗುತ್ತಿಗೆ ಕಾರ್ಮಿಕರು ವಿದ್ಯುತ್ ಸ್ಪರ್ಶದಿಂದ ಅಸ್ವಸ್ಥಗೊಂಡಾಗ ಪೊಲೀಸರು ಆಗಮಿಸಿ ಆಸ್ಪತ್ರೆಗೆ ಸಾಗಿಸುವಾಗ ಬೆಳ್ಳೂಡಿಯ ಮಾರುತಿ (20) ಮೃತಪಟ್ಟಿದ್ದು, ಮಹೇಶ್ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಈ ಘಟನೆಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. 

Leave a Reply

Your email address will not be published.