ಹರಿಹರ ಪೌರಾಯುಕ್ತರಾಗಿ ಉದಯಕುಮಾರ್ ತಳವಾರ

ಹರಿಹರ ಪೌರಾಯುಕ್ತರಾಗಿ ಉದಯಕುಮಾರ್ ತಳವಾರ

ಹರಿಹರ, ನ.26- ನಗರಸಭೆಯ ಪೌರಾಯುಕ್ತರಾಗಿ ಉದಯ ಕುಮಾರ್ ತಳವಾರ ಅವರು ಇಂದು ಸಂಜೆ ನಗರಸಭೆಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಶ್ರೀಮತಿ ಎಸ್. ಲಕ್ಷ್ಮಿಅವರು ವರ್ಗಾವಣೆ ಯಾಗಿದ್ದು, ಅವರ ಸ್ಥಾನಕ್ಕೆ  ಉದಯಕುಮಾರ್ ತಳವಾರ ಆಗಮಿಸಿದ್ದಾರೆ.

ಈ ವೇಳೆ ಮಾತನಾಡಿದ ಉದಯ ಕುಮಾರ್, ತಾವು ಚಾಮರಾಜನಗರ, ಬಿಬಿಎಂಪಿ ಸಹಾಯಕ ಅಭಿಯಂತರರಾಗಿ, ಬೆಳಗಾವಿ ಮಹಾನಗರ ಪಾಲಿಕೆ ಎಇಇಯಾಗಿ ಹಾಗೂ ಹರಿಹರ ನಗರದಲ್ಲೂ ಆರು ತಿಂಗಳ ಸೇವೆಯನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಎಇಇ ಬಿರಾದಾರ, ಇಂಜಿನಿಯರ್ ಮಹೇಶ್ ಕೊಡಬಾಳು,  ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್, ದಾದಾ ಖಲಂದರ್, ಎಂ. ಎಸ್. ಬಾಬುಲಾಲ್, ಅಬ್ದುಲ್ ಅಲಿಂ, ನಗರಸಭೆ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಅಣ್ಣಪ್ಪ, ಮಂಜುನಾಥ್,  ಪ್ರಕಾಶ್,  ಮುಖಂಡರಾದ ಮಾರುತಿ ಬೇಡರ್, ಕೆ.ಬಿ  ಮಂಜುನಾಥ್ ಕಳ್ಳೇರ್, ಎಂ.ಹೆಚ್. ಬಸವರಾಜ್ ಮೆಣಸಿನಾಳ, ಬಾಷಾ, ಜಿ. ನಂಜಪ್ಪ ಮತ್ತು ಇತರರು ಹಾಜರಿದ್ದರು.

Leave a Reply

Your email address will not be published.