ಜಾತಿಗೊಂದು ನಿಗಮ, ಮಂಡಳಿ ಅಸ್ತಿತ್ವಕ್ಕೆ ತರುವುದು ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಟ್ಟಂತೆ

ಹರಪನಹಳ್ಳಿ, ನ.26- ಜಾತಿ ಗೊಂದು ನಿಗಮ, ಮಂಡಳಿ ಅಸ್ತಿತ್ವಕ್ಕೆ ತರುವುದು ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಟ್ಟಂತೆ, ಸರ್ಕಾರ ವೈಫಲ್ಯ ವಾಗಿರುವುದರಿಂದ ನಿಗಮ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಛೇಡಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಇಂತಹ ನಿಗ ಮಗಳಿಂದ ಏನೂ ಉಪಯೋಗವಿಲ್ಲ.ಉದ್ದೇಶಿತ ವಿಜಯನಗರ ಜಿಲ್ಲೆಯವರಿಗೂ ಹೈದ್ರಾಬಾದ್ ಕರ್ನಾಟಕದ 371 ಜೆ ಸೌಲಭ್ಯ ಸಿಕ್ಕೇ ಸಿಗುತ್ತದೆ. ಇದರಲ್ಲಿ ಅನುಮಾನ ಬೇಡ ಎಂದು ಬಳ್ಳಾರಿ ಜಿಲ್ಲೆ ವಿಭಜನೆಯಾಗಿ ವಿಜಯನಗರ ಜಿಲ್ಲೆಯಾದರೆ 371 ಜೆ ಸೌಲಭ್ಯ ಸಿಗುವುದಿಲ್ಲ ಎಂಬುದು ತಪ್ಪು ಅಭಿಪ್ರಾಯ. ಹೊಸ ಜಿಲ್ಲೆಯ ಜನತೆಗೆ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂದು ಅವರು ತಿಳಿಸಿದರು.

ವಿಜಯನಗರ ಜಿಲ್ಲೆ ರಚನೆ ನಿರ್ಧಾರ ರಾಜ್ಯ ಸರ್ಕಾರದ್ದು. ನಾವು ಸರ್ಕಾರದ ನಿರ್ಣಯಗಳ ಬಗ್ಗೆ ಏನೂ ಹೇಳಲಿಕ್ಕೆ ಆಗಲ್ಲ, ತಡೆಯ ಲಿಕ್ಕೂ ಆಗಲ್ಲ, ಸ್ವಾಗತ ಮಾಡುತ್ತೇನೆ. ಜಿಲ್ಲೆ ರಚನೆ ವಿರುದ್ಧ ಬಳ್ಳಾರಿ ಬಂದ್ ವಿಚಾರ ಅವರವರ ವೈಯಕ್ತಿಕವಾಗಿದ್ದು, ವಿಜಯ ನಗರ ಜಿಲ್ಲೆಯಾದರೂ ಸಂತೋಷ, ಆಗದಿದ್ದರೂ ಸಂತೋಷ ಎಂದು ಅವರು ಹೇಳಿದರು.

ಹರಪನಹಳ್ಳಿ ಕ್ಷೇತ್ರದಲ್ಲಿ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳು ಜಾಸ್ತಿ ಇರುವುದರಿಂದ ಸ್ಪರ್ಧೆ ಜಾಸ್ತಿ ಯಾಗಿ, ಭಿನ್ನಮತ ಹೆಚ್ಚಿರುತ್ತದೆ. ನಾನು ಗಮನಿಸಿ ದ್ದೇನೆ, ಹೈಕಮಾಂಡ್ ಗೂ ವರದಿ ಮಾಡಿದ್ದೇವೆ. ನನಗೆ ಜವಾಬ್ದಾರಿ ವಹಿಸಿದರೆ ಖಂಡಿತಾ ಬಗೆಹರಿಸುತ್ತೇನೆ ಎಂದು ಅವರು ತಿಳಿಸಿದರು.

ಹರಪನಹಳ್ಳಿ ಕ್ಷೇತ್ರದಲ್ಲಿ ಮಾಜಿ ಶಾಸಕರೂ ಇಲ್ಲ, ಹಾಲಿ ಶಾಸಕರೂ ಇಲ್ಲ. ಆದ್ದರಿಂದ ಭಿನ್ನಮತ ಇದೆ ಎಂದರು. ರಾಜ್ಯದಲ್ಲಿ, ರಾಷ್ಟ್ರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಪುನಶ್ಚೇತನವಾಗುತ್ತಿದೆ. ಕಾಂಗ್ರೆಸ್ ಯಾವತ್ತೂ ನಿರ್ಜೀವ ಆಗಲ್ಲ, ನಿರಂತರ ಇರುವ ಪಕ್ಷ ಎಂದರು. ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾನಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಗ್ರಾಮ ಪಂಚಾಯ್ತಿ ಚುನಾವಣೆಗಳು ಸಮಯಕ್ಕೆ ಸರಿಯಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕೋರ್ಟ್ ಮೊರೆ ಹೋಗಿದ್ದು ಎಂದು ಹೇಳಿದರು.

ಪುರಸಭಾ ಸದಸ್ಯರುಗಳಾದ ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್, ಗೊಂಗಡಿ ನಾಗರಾಜ್, ಉದ್ದಾರ ಗಣೇಶ್, ಮುಖಂಡರಾದ ಚಿಕ್ಕೇರಿ ಬಸಪ್ಪ, ಟಿ.ಎಚ್.ಎಂ. ಮಂಜುನಾಥ್, ದುಗ್ಗಾವತ್ತಿ ಮಂಜುನಾಥ್, ನವರಂಗ್, ನಿಶಾದ್  ಮತ್ತು ಇತರರು ಹಾಜರಿದ್ದರು.

Leave a Reply

Your email address will not be published.