‘ಧರ್ಮಕ್ಕೆ ರಾಜಕಾರಣದ ಅವಶ್ಯಕತೆ ಇಲ್ಲ’ ಲೇಖನ ಕುರಿತು ನನ್ನ ಅನಿಸಿಕೆ

ಮಾನ್ಯರೇ, ದಿನಾಂಕ 25.11.2020 ರ ಜನತಾವಾಣಿಯಲ್ಲಿ  ‘ಧರ್ಮಕ್ಕೆ ರಾಜಕಾರಣದ ಅವಶ್ಯಕತೆ ಇಲ್ಲ’ ಎಂಬ ಲೇಖನ ಕುರಿತು ನನ್ನ ಅನಿಸಿಕೆ ಲಿಂಗಾಯತ ಧರ್ಮವು 12 ಶತಮಾನದಿಂದಲೂ ಸ್ವತಂತ್ರ ಧರ್ಮವಾಗಿದೆ, ಇಂದಿನ ಹೋರಾಟ ಕೇವಲ  ಆ ಸ್ವತಂತ್ರ ಧರ್ಮಕ್ಕೆ ‌ಸಂವಿಧಾನಿಕ ಮಾನ್ಯತೆಯನ್ನು ಕೊಡಬೇಕೆಂದು ಮಾತ್ರ.

ಲಿಂಗಾಯತ ಧರ್ಮದ ಆರಾಧ್ಯ ಗುರುಗಳು ಬಸವಣ್ಣನವರು ಹಾಗೂ ಅವರೊಂದಿಗಿದ್ದ ಶರಣರು ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ಅರ್ಥವಿದೆ, ಕಾರಣ ಇದು ಮಾನವ ಇತಿಹಾಸದಲ್ಲಿ ನಡೆದ ಅಪೂರ್ವ ಕ್ರಾಂತಿ ‘ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ, ಮಹಿಳೆಗೆ ಸಮಾನತೆ ನೀಡಿದ, ರಾಜಪ್ರಭುತ್ವದ ಬದಲು ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಉಗಮವಾದ ಧರ್ಮವೇ ಲಿಂಗಾಯತ ಧರ್ಮ.

ಕಾರಣ ಇದನ್ನು ಕೆಲವೊಂದು ಜನರ ಅರಿವು ಇಲ್ಲದ ಆಚರಣೆಯನ್ನು ಉದಾಹರಿಸಿ ಅಲ್ಲಗಳೆಯಬಾರದು ಎಂದು ತಮ್ಮಲ್ಲಿ ಬಿನ್ನಹ.


– ಮಹಾಂತೇಶ ಅಗಡಿ, ಬಸವ ಬಳಗ (ರಿ), ಬಸವ ಮಹಾಮನೆ, ದಾವಣಗೆರೆ.
99452 21201

Leave a Reply

Your email address will not be published.