ಅನಧಿಕೃತ ಬಯೋ ಫರ್ಟಿಲೈಜರ್ಸ್ ದಾಸ್ತಾನುದಾರನಿಗೆ ನೋಟಿಸ್

ಹೊನ್ನಾಳಿ, ನ.25- ಕೂಲಂಬಿ ಗ್ರಾಮದ ಕಿರಾಣಿ ಮಳಿಗೆಯೊಂದರಲ್ಲಿ ಅನಧಿಕೃತವಾಗಿ ಬಯೋ ಫರ್ಟಿ ಲೈಜರ್ಸ್ ದಾಸ್ತಾನು ಮಾಡಿದ್ದು, ಕೃಷಿ ಇಲಾಖೆ ನೋ ಟೀಸ್ ಜಾರಿ ಮಾಡಿದೆ. ರಸಗೊಬ್ಬರ ದಾಸ್ತಾನು ಅಥವಾ ಮಾರಾಟ ಮಾಡಲು ಕೃಷಿ ಇಲಾಖೆಯಿಂದ ರಸಗೊಬ್ಬರ ಪರವಾನಿಗೆ ಪಡೆದಿರುವುದಿಲ್ಲ. ಅಲ್ಲದೇ ಈ ಕುರಿತಂತೆ ಯಾವುದೇ ಇನ್ವಾಯಿಸ್, ರಸೀದಿ ಬಿಲ್ಲುಗಳ ದಾಖಲೆಗಳೂ ಇರುವು ದಿಲ್ಲ. ನಿಮ್ಮ ಮೇಲೆ ಕಾನೂನಿನ್ವಯ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದಕ್ಕೆ ನವೆಂಬರ್ 30 ರೊಳಗಾಗಿ ಸಮಜಾಯಿಷಿ ನೀಡುವಂತೆ ನೋಟಿಸ್ ಕಳುಹಿಸಿದೆ.

ಅನಧಿಕೃತ ಬಯೋ ಫರ್ಟಿಲೈಜರ್ಸ್ ಪೂರೈಕೆ ಮಾಡಿದವರ ಹೆಸರು, ವಿಳಾಸ , ಇನ್ವಾಯಿಸ್ ವಿವರ ಸಲ್ಲಿಸತಕ್ಕದ್ದು. ಇಲ್ಲದಿದ್ದಲ್ಲಿ   ನಿಮ್ಮ ವಿರುದ್ಧವೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು  ಮಾಲೀಕ ಪ್ರವೀಣ್‌ ಅವರಿಗೆ ನೀಡಲಾದ ನೋಟಿಸ್‌ನಲ್ಲಿ  ತಿಳಿಸಲಾಗಿದೆ ಎಂದು ಹೊನ್ನಾಳಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published.