ದಿನಾಂಕ 25.11.2020 ರ ಜನತಾವಾಣಿಯಲ್ಲಿ 'ಧರ್ಮಕ್ಕೆ ರಾಜಕಾರಣದ ಅವಶ್ಯಕತೆ ಇಲ್ಲ' ಎಂಬ ಲೇಖನ ಕುರಿತು ನನ್ನ ಅನಿಸಿಕೆ ಲಿಂಗಾಯತ ಧರ್ಮವು 12 ಶತಮಾನದಿಂದಲೂ ಸ್ವತಂತ್ರ ಧರ್ಮವಾಗಿದೆ, ಇಂದಿನ ಹೋರಾಟ ಕೇವಲ ಆ ಸ್ವತಂತ್ರ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಯನ್ನು ಕೊಡಬೇಕೆಂದು ಮಾತ್ರ.
ರಾಷ್ಟ್ರಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿ ಆರಂಭ
ದಿ. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿನೆನಪಿನ ಅಂಗವಾಗಿ 5 ದಿನಗಳ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ ರಾಷ್ಟ್ರಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿಗೆ ಇಂದು ಸಂಜೆ ಚಾಲನೆ ದೊರಕಿತು.
ಬನ್ನಿಕೋಡು ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಹೆಚ್.ಹೆಚ್.ನಾಗರಾಜ್ ಆಯ್ಕೆ
ಬನ್ನಿಕೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಹರಿಹರದ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಅವರ ಸಹೋದರ ಹಾಗೂ ದಿ|| ಹೆಚ್.ಹನುಮನಗೌಡ್ರು ಅವರ ಪುತ್ರ ಹೆಚ್.ಹೆಚ್.ನಾಗರಾಜ್ ಆಯ್ಕೆಯಾಗಿದ್ದಾರೆ.
ರೈತರ ಫಸಲು ಪರಿವರ್ತನಾ, ವ್ಯಾಪಾರೋದ್ಯಮ ಸಂಘದ ಅಧ್ಯಕ್ಷರಾಗಿ ಪವಿತ್ರ ಶಾಮನೂರು
ನಗರದ ರೈತರ ಫಸಲುಗಳ ಪರಿವರ್ತನಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಾಮಾನ್ಯ ಕ್ಷೇತ್ರಕ್ಕೆ ಎಸ್.ಕೆ. ಪವಿತ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ಮನೆ ಬಾಗಿಲಿಗೆ ಪಾಲಿಕೆ ರಾಷ್ಟ್ರದಲ್ಲೇ ಮೊದಲು
ಇಡೀ ರಾಷ್ಟ್ರದಲ್ಲೇ ಮೊದಲ ಬಾರಿಗೆ ಜಾರಿಗೆ ತರುತ್ತಿರುವ ಮನೆ ಬಾಗಿಲಿಗೆ ಮಹಾನಗರಪಾಲಿಕೆ ಯೋಜನೆಯು ಜನಸ್ನೇಹಿ ಹಾಗೂ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಸವಲತ್ತು ತಲುಪದಿರುವುದು ಕಂಡರೆ ಕ್ರಮ
ಸರ್ಕಾರದ ಎಲ್ಲಾ ಇಲಾಖೆಯ ಸವಲತ್ತುಗಳೂ ಅರ್ಹ ಪ್ರತಿಯೊ ಬ್ಬರಿಗೂ ದೊರಕಬೇಕು. ಒಂದು ವೇಳೆ ಯಾವುದೇ ಇಲಾಖೆಯ ಸವಲತ್ತು ಅರ್ಹರಿಗೆ ತಲುಪದೇ ಇರುವುದು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಪಾಲಿಕೆ ಖರ್ಚಿಲ್ಲದೇ ನಗರದಾದ್ಯಂತ ಎಲ್ಇಡಿ ದೀಪಗಳ ಅಳವಡಿಕೆ
ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಪಾಲಿಕೆಯಿಂದ ಹಣ ವೆಚ್ಚ ಮಾಡದೇ ನಗರದೆಲ್ಲೆಡೆ ಎಲ್.ಇ.ಡಿ. ದೀಪಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ತಿಳಿಸಿದ್ದಾರೆ.
ಬ್ಯೂಟಿಪಾರ್ಲರ್ ಅಸೋಸಿಯೇಷನ್ನಿಂದ ಕನ್ನಡ ರಾಜ್ಯೋತ್ಸವ
ಜಿಲ್ಲಾ ಬ್ಯೂಟಿಪಾರ್ಲರ್ ಅಸೋಸಿಯೇಷನ್ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಮುಂದಿನ ವರ್ಷ ಜಿಲ್ಲೆಯಲ್ಲಿ ವಿಜೃಂಭಣೆಯ ರಾಜ್ಯೋತ್ಸವ
ಕನ್ನಡ ಭಾಷೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಮುಂದಿನ ಒಂದು ವರ್ಷದ ಅವಧಿ ಯನ್ನು ‘ಕನ್ನಡ ಕಾಯಕ ವರ್ಷವಾಗಿ’ ಆಚರಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ತಿಳಿಸಿದ್ದಾರೆ.
ಅನಧಿಕೃತ ಬಯೋ ಫರ್ಟಿಲೈಜರ್ಸ್ ದಾಸ್ತಾನುದಾರನಿಗೆ ನೋಟಿಸ್
ಹೊನ್ನಾಳಿ : ಕೂಲಂಬಿ ಗ್ರಾಮದ ಕಿರಾಣಿ ಮಳಿಗೆಯೊಂದರಲ್ಲಿ ಅನಧಿಕೃತವಾಗಿ ಬಯೋ ಫರ್ಟಿ ಲೈಜರ್ಸ್ ದಾಸ್ತಾನು ಮಾಡಿದ್ದು, ಕೃಷಿ ಇಲಾಖೆ ನೋ ಟೀಸ್ ಜಾರಿ ಮಾಡಿದೆ. ರಸಗೊಬ್ಬರ ದಾಸ್ತಾನು ಅಥವಾ ಮಾರಾಟ ಮಾಡಲು ಕೃಷಿ ಇಲಾಖೆಯಿಂದ ರಸಗೊಬ್ಬರ ಪರವಾನಿಗೆ ಪಡೆದಿರುವುದಿಲ್ಲ.