ಹೊನ್ನಾಳಿಯಲ್ಲಿ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಪ್ರಯತ್ನ

ಹೊನ್ನಾಳಿ, ನ.24-  ರಾಜ್ಯ ಸರಕಾರದಿಂದ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಈ ಬಾರಿ ಹೊನ್ನಾಳಿ ತಾಲ್ಲೂಕಿನಲ್ಲಿ ಆಚರಿಸಲು ಚಿಂತನೆ ನಡೆಸಿರುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಸದಸ್ಯ ಹೊಸಕೇರಿ ಸುರೇಶ್  ಅವರ ನಿವಾಸದಲ್ಲಿ ಮನೆ ಮನೆಗೆ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖ್ಯಮಂತ್ರಿ ಯಾಡಿಯೂರಪ್ಪನವರು ಶಿವಮೊಗ್ಗ ಜಿಲ್ಲೆಯಲ್ಲಿ ಈ ಚಲನ ಚಿತ್ರೋತ್ಸವ ನಡೆಸಲು ತಿರ್ಮಾನಿಸಿದ್ದು, ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ  ಸಿಲುಕಿ, ಮನೋರಂಜನೆ ದೊರೆಯದ ತಾಲ್ಲೂಕಿನ ಜನತೆಗೆ ಈ ಚಲನ ಚಿತ್ರೋತ್ಸಕ್ಕೆ  ಅವಕಾಶ ದೊರೆತರೆ ಅನುಕೂಲವಾಗಲಿದೆ. ಇದಕ್ಕೆ ತಾಲ್ಲೂಕಿನ ಕಲಾವಿದರ ಸಹಕಾರ ಅತ್ಯವಶ್ಯಕ ಎಂದರು. 

ಮುಖ್ಯಮಂತ್ರಿಗಳ ಬಂಗಾರದ ಪದಕ ಪಡೆದ ಹೊನ್ನಾಳಿ ಪೊಲೀಸ್ ವೃತ್ತಾಧಿಕಾರಿ ದೇವರಾಜ ಹಾಗೂ ಒಡವೆ, ನಗದು ಇರುವ ಪರ್ಸ್‌ ಅನ್ನು ಅದರ ಮಾಲೀಕರಿಗೆ ತಲುಪಿಸಿದ ಆಟೋ ಚಾಲಕ ಯೋಗೀಶ್‌ ಅವರುಗಳನ್ನು ಸನ್ಮಾನಿಸಲಾಯಿತು.

ಹೊಸಕೇರಿ ಸುರೇಶ ಮಾತನಾಡಿದರು. ಸಭೆಯಲ್ಲಿ ಪ್ರೇಮ್ ಕುಮಾರ್ ಬಂಡಿಗಡಿ, ಉಪನ್ಯಾಸಕ ನಾಗವಂದ ರವಿಕುಮಾರ್, ಶಿಕ್ಷಕರಾದ ಚಂದ್ರಶೇಖರ್, ಹಾಲಸ್ವಾಮಿ, ಪತ್ರಕರ್ತ ಮೃತ್ಯುಂಜಯ ಪಾಟೀಲ್, ಸರಳಿಮನೆ ಮಂಜು, ರಾಮಾಚಾರಿ ಇನ್ನಿತರರಿದ್ದರು. ಪುಟಾಣಿ ಕಲಾವಿದರು ಹಾಡಲು ಅವಕಾಶ ಕಲ್ಪಿಸಲಾಗಿತ್ತು.

Leave a Reply

Your email address will not be published.