ಪಂಚಾಯಿತಿ ಇಂಜಿನಿಯರ್ ಸೇರಿದಂತೆ ಐವರ ಮೇಲೆ ದಾಳಿ ಮಾಡಿದ ಮುಷ್ಯ

ಹೊನ್ನಾಳಿ, ನ.24- ಪಟ್ಟಣದಲ್ಲಿ ಮುಷ್ಯನ ಹಾವಳಿಯ ದೂರು ಹೆಚ್ಚಾದಂತೆ ಮಂಗಳವಾರ ಸಂಜೆ ವೀಕ್ಷಣೆಗೆಂದು ಸಿಬ್ಬಂದಿಯೊಂದಿಗೆ ಬಂದಿದ್ದ ಪಟ್ಟಣ ಪಂಚಾಯಿತಿ ಇಂಜಿನಿಯರ್ ದೇವರಾಜ್‍ ಅವರ ಮೇಲೆ ಮುಷ್ಯ ದಾಳಿ ಮಾಡಿ ಪರಚಿದ ಘಟನೆ ನಡೆದಿದೆ. ಮಧ್ಯಾಹ್ನ ದೊಡ್ಡಪೇಟೆಯ ನಾಲ್ಕೈದು ಜನರ ಮೇಲೆ ಇದೇ ರೀತಿ ದಾಳಿಮಾಡಿ ಗಾಯಗೊಳಿಸಿದ್ದು ಕಳೆದ ಹತ್ತು ದಿನಗಳಿಂದ ಇದರ ದಾಳಿ ನಿರಂತರವಾಗಿದ್ದು, ಸೋಮವಾರವೂ ಸಹ 5 ಕ್ಕೂ ಹೆಚ್ಚು ಜನರಿಗೆ ಹಾನಿ ಮಾಡಿದೆ. 

ಈವರೆಗೂ 30ಕ್ಕೂ ಹೆಚ್ಚು ಜನರಿಗೆ ಇದೇ ರೀತಿ ಗಾಯಗೊಳಿಸಿದ್ದು, ಪಟ್ಟಣದ ದೊಡ್ಡಪೇಟೆ, ಕಲ್ಕೇರಿ, ಗೌಡರ ಕೇರಿ ನಿವಾಸಿಗಳು ಸಂಚರಿಸುತ್ತಿರುವ ಬೈಕ್‌ಗಳ ಮೇಲೆ, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದ್ದು, ಭಯದಿಂದ ಜೀವನ ನಡೆಸುವಂತೆ ಮುಷ್ಯವು ತನ್ನ ಹಾವಳಿ ಮುಂದುವರೆಸಿದೆ. ಪಾಟೀಲ್ ಮನೆ ಮುಂದಿನ ಬೈಕ್ ಮೇಲೆ ಕೂತಿರುವ ಮುಷ್ಯವು ಆಟೋ ಒಂದರಲ್ಲಿ ಚಾಲಕನನ್ನು ಹೆದರಿಸಿ ಕೂತಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

Leave a Reply

Your email address will not be published.