ಬರಲಿದೆ ಸಂಕಷ್ಟದ ಸೆಕೆಂಡ್ ಪಾರ್ಟ್

ರಾಜಕೀಯ ವಿಪ್ಲವ

ಇತ್ತೀಚೆಗೆ ನಡೆದ ಗ್ರಹಣಗಳ ಪ್ರಕಾರ ರಾಜಕೀಯ ವಿಪ್ಲವ ಎದುರಾಗಲಿದೆ. ರಾಜಕೀಯ ವರ್ಗದಲ್ಲಿ ಏರಿಳಿತಗಳು, ತೊಂದರೆ, ಬದಲಾವಣೆಗಳು, ಅಶಾಂತಿ ತಲೆ ತೋರಲಿವೆ ಎಂದು ಕೋಡಿಹಳ್ಳಿ ಶ್ರೀಗಳು ನುಡಿದರು. 

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರಾ ? ಎಂಬ ಪ್ರಶ್ನೆಗೆ `ನೋ ಕಮೆಂಟ್ಸ್’ ಎಂದಷ್ಟೇ ಶ್ರೀಗಳು ಉತ್ತರಿಸಿದರು.


ಸಾವು ತರುವ ಮತ್ತೊಂದು ಕಾಯಿಲೆ ಬರಲಿದೆ: ಕೋಡಿಹಳ್ಳಿ ಶ್ರೀ

ದಾವಣಗೆರೆ, ನ.23- ಜನತೆ ಕೊರೊನಾ ದಂತಹ ಸಂಕಷ್ಟದಿಂದ ಮೈ ಕೊಡವಿ ನಿಲ್ಲುತ್ತಿದ್ದಂತೆ ಇಂತಹದ್ದೇ ಸಂಕಷ್ಟದ `ಸೆಕೆಂಡ್ ಪಾರ್ಟ್’ ತಯಾರಾಗುತ್ತಿದೆ ಎಂದು ಹಾರನಹಳ್ಳಿ ಕೋಡಿ ಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಸೋಮವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶ್ರೀಗಳು ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿ, ಮಾನಸಿಕ ಕ್ಷೋಭೆ ಯಿಂದ ಬರುವಂತಹ ಈ ಕಾಯಿಲೆಯೂ ಸಾವು ತರುತ್ತದೆ ಎಂದು ಹೇಳಿದರು.

ಶಾಲೆಗಳನ್ನು ತೆರೆದರೂ ಮತ್ತೆ ಮುಚ್ಚಲ್ಪಡುತ್ತವೆ.  ರೋಗ ಮತ್ತೆ ಬೆನ್ನತ್ತಲಿದೆ. ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ. ಯುಗಾದಿಯವ ರೆಗೂ ಜೀವನ ಕಷ್ಟ ಎಂದರು.

ಹಿಂದೆ ಗ್ರಹಣಗಳು ಬಂದಿದ್ದವು. ಈಗಲೂ ಎರಡು ಗ್ರಹಣಗಳು ಬಂದಿವೆ. ಉತ್ತರ ಕರ್ನಾಟಕದಲ್ಲಿ ಜಲ ಪ್ರಳಯ ವಾಗುತ್ತದೆ ಎಂದು ಹೇಳಿದ್ದೆ, ಹಾಗೆಯೇ ಆಗಿದೆ. ಇಂತಹ ಪ್ರಸಂಗಗಳು ಇನ್ನೂ ಜರುಗಲಿವೆ. ಡಿಸೆಂಬರ್, ಜನವರಿ ವೇಳೆಗೆ ಮಳೆ ಸೇರಿದಂತೆ ವಿವಿಧ ಅನಾಹುತಗಳು ಸಂಭವಿಸುವ ಲಕ್ಷಣಗಳಿವೆ ಎಂದು ಹೇಳಿದರು.

ಕೊರೊನಾ ಜಗತ್ತಿನಾದ್ಯಂತ ಇರುವ ವ್ಯಾದಿ. ಜನವರಿ ವರೆಗೂ ಇದರ ಬಗ್ಗೆ ಏನನ್ನೂ ಹೇಳಲಾ ಗದು ಎಂದ ಶ್ರೀಗಳು, ಜನರು ಸಂಪ್ರದಾಯ, ಸಂಸ್ಕೃತಿ, ಆಚರಣೆ, ಸ್ವಚ್ಚತೆಯನ್ನು ಮರೆತಿದ್ದರಿಂದ ಕಾಯಿಲೆಗಳು ಆರಂಭವಾಗಿವೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

ಪ್ರಸ್ತುತ ದಿನಗಳಲ್ಲಿ ಮನುಷ್ಯ ಮಾತನಾಡದೆ, ಹಣ ಮಾತನಾಡುವಂತಾಗಿದೆ.
`ವೆನ್ ಮನಿ ಈಸ್ ಸ್ಪೀಕ್,
ಟ್ರುತ್ ವಿಲ್ ಸೈಲೆಂಟ್ ‘ ಎಂಬ ಇಂಗ್ಲಿಷ್ ಗಾದೆ
ಉದಾಹರಿಸಿದ ಶ್ರೀಗಳು, ಈಗ ಟ್ರುತ್ ಸೈಲೆಂಟ್ ಅಲ್ಲ, ಸತ್ತೇ ಹೋಗು ತ್ತಿದೆ. ಮೌಲ್ಯಗಳು ಮರೆಯಾಗಿವೆ. ಇದಕ್ಕೆ
ದೇವರಿಂದಲೇ ಮುಕ್ತಿ ಸಿಗಲಿದೆ ಎಂದು ಹೇಳಿದರು.

Leave a Reply

Your email address will not be published.