ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಸರ್ಕಾರಕ್ಕೆ ಎಐಡಿಎಸ್‌ಓ ಆಗ್ರಹ

ದಾವಣಗೆರೆ, ನ.21- ರಾಜ್ಯ ಸರ್ಕಾರ ಕಾಲೇಜುಗಳನ್ನು ಪ್ರಾರಂಭಿಸುವಂತೆ ಆದೇಶಿದ್ದು, ಹಲವು ಜಿಲ್ಲೆಗಳಲ್ಲಿ ಹಾಸ್ಟೆಲ್ ವ್ಯವಸ್ಥೆ, ಊಟ ಹಾಗೂ ವಸತಿ ವ್ಯವಸ್ಥೆ ದೊರಕದೆ ಪರದಾಡುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಕೂಡಲೇ ಸರ್ಕಾರ ಪರಿಹರಿಸಬೇಕೆಂದು ಎಐಡಿಎಸ್‌ಓ ಆಗ್ರಹಿಸಿದೆ.

ಬಡ ವಿದ್ಯಾರ್ಥಿಗಳು ತಮ್ಮದೇ ಖರ್ಚಿನಲ್ಲಿ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಂಡು ಹಾಸ್ಟೆಲ್‌ಗೆ ಬಂದಿದ್ದರೂ ಇನ್ನೂ ಹಾಸ್ಟೆಲ್ ಪ್ರಾರಂಭವಾಗಿಲ್ಲ. ಅಲ್ಲಿನ ಅಧಿಕಾರಿಗಳು ನೀವೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಬೇಜವಾಬ್ದಾರಿತನ ತೋರಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೆಡೆ 50 ವಿದ್ಯಾರ್ಥಿಗಳು ಬಂದರೆ ಮಾತ್ರ ಊಟದ ವ್ಯವಸ್ಥೆಯನ್ನು ಪ್ರಾರಂಭಿಸುತ್ತೇವೆ ಎಂದು ವಾರ್ಡನ್‌ಗಳು ಹೇಳುತ್ತಿದ್ದಾರೆ. ಇದು ಎಷ್ಟು ಸರಿ?ಒಬ್ಬನೇ ಒಬ್ಬ ವಿದ್ಯಾರ್ಥಿ ಇದ್ದರೂ ಕೂಡ ಆತನಿಗೆ ಊಟ-ವಸತಿ ವ್ಯವಸ್ಥೆ ಮಾಡಬೇಕೆಂದು ಸಂಘಟನೆ ಒತ್ತಾಯಿಸುತ್ತಿದ್ದು, ಕಾಲೇಜು ಕ್ಯಾಂಟೀನ್‌ಗಳನ್ನು ಕೂಡಲೇ ಪ್ರಾರಂಭಿಸಬೇಕು. ಹಾಗೂ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ರಿಯಾಯ್ತಿ ದರದಲ್ಲಿ ಊಟ ನೀಡಬೇಕು.

ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯದ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಹೋರಾಟ ಸಂಘಟಿಸಲಾಗುವುದು ಎಂದು ಜಿಲ್ಲಾಧ್ಯಕ್ಷೆ ಜೆ. ಸೌಮ್ಯ ಹಾಗೂ ಕಾರ್ಯದರ್ಶಿ ಎನ್. ಪೂಜಾ ತಿಳಿಸಿದ್ದಾರೆ.

Leave a Reply

Your email address will not be published.