ದಿನಪತ್ರಿಕೆಗಳನ್ನು ಓದಿ ಪ್ರಜ್ಞಾವಂತರಾಗಿ

ಚಳ್ಳಕೆರೆ, ನ.21- ಪುಸ್ತಕಗಳು, ದಿನಪತ್ರಿಕೆ, ಕಥೆ-ಕಾದಂಬರಿಗಳನ್ನು ಓದುವ ಮೂಲಕ ಸಾರ್ವಜನಿಕರು ಪ್ರಜ್ಞಾವಂತರಾಗಬೇಕು ಎಂದು ಗ್ರಂಥಪಾಲಕ ಡಿ. ತಿಮ್ಮರಾಯ ಕರೆ ನೀಡಿದರು. ಅವರು ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಂಥಾಲಯಕ್ಕೆ ಹೊಸ ಹೊಸ ಪುಸ್ತಕಗಳು ಬಂದಿದ್ದು, ಓದಿ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳುವಂತೆ ಮನವಿ ಮಾಡಿದರು. ಪತ್ರಕರ್ತ ಸಿ.ವೈ. ಗಂಗಾಧರ್ , ಬುಡ್ನಹಟ್ಟಿಯ ಪಂಚಾಯ್ತಿ ಗ್ರಂಥಪಾಲಕ ನಾರಾಯಣಪ್ಪ, ಸಿಬ್ಬಂದಿಗಳಾದ ಟಿ. ರಾಘವೇಂದ್ರ, ಭೋಜರಾಜ್, ಮಾರುತಿ ಇನ್ನಿತರರಿದ್ದರು.

Leave a Reply

Your email address will not be published.