ಕವನಗಳುಮನದ ಮಂಥನ…November 19, 2020November 19, 2020By janathavani8 ಮನದ ಮಂಥನವಾಗದೊಡೆ ಮನವು ತಿಳಿಯಾಗದು ಭೂಮಿಯೊಳು ಬೀಜವ ಬಿತ್ತದೊಡೆ ಧರೆಯು ಶುಭಫಲವನೆಂದೂ ನೀಡದು. ಕಂದನು ರೋದಿಸದಿದ್ದೊಡೆ ಕಂದನ ಉದರವೆಂದೂ ತುಂಬದು. ಸಂಕಲ್ಪಿಸಿ ಕರ್ಮವ ಮಾಡದಿದ್ದೊಡೆ ಕಾರ್ಯದಲಿ ಜಯಸಿಗದೆಂದನು ನಮ್ಮ ವೀರೇಶ್ವರ. ಶ್ರೀ ಈರಪ್ಪ ಬಿಜಲಿ