ಬನಶಂಕರಿ ಬಡಾವಣೆ ಅಭಿವೃದ್ಧಿಗೆ ಆದ್ಯತೆ : ಮೇಯರ್‌

ಬನಶಂಕರಿ ಬಡಾವಣೆ ಅಭಿವೃದ್ಧಿಗೆ ಆದ್ಯತೆ : ಮೇಯರ್‌

ದಾವಣಗೆರೆ, ನ.7- ನಗರದ ಬೈಪಾಸ್ ರಸ್ತೆ ಪಕ್ಕದ ಬನಶಂಕರಿ ಬಡಾವಣೆಯನ್ನು ವಿಶೇಷ ಅನುದಾನದಡಿ ಅಭಿವೃದ್ದಿಪಡಿಸ ಲಾಗುವುದು. ಇಲ್ಲಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ  ನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಭರವಸೆ ನೀಡಿದ್ದಾರೆ.

ಬನಶಂಕರಿ ಬಡಾವಣೆಗೆ ನಿನ್ನೆ ಭೇಟಿ ನೀಡಿದ ಮೇಯರ್ ಅಜಯ್ ಕುಮಾರ್ ಅವರು, ಬಡಾವಣೆಯಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಅವರು, ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಂಡು ಬರುತ್ತಿದೆ. ಹಾಗಾಗಿ ಭೇಟಿ ನೀಡಿ ಪರಿಶೀಲಿಸ ಲಾಗುತ್ತಿದೆ. ಬಡಾವಣೆಯ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಬಗ್ಗೆ ಇಲ್ಲಿನ ನಿವಾಸಿ ಗಳು ಸಮಸ್ಯೆ ನಿವಾರಣೆಗೆ ಮನವಿ ಸಲ್ಲಿಸಿ ದ್ದಾರೆ. ಅತೀ ಶೀಘ್ರದಲ್ಲಿ ಸೌಲಭ್ಯ ಕಲ್ಪಿಸಲಾ ಗುವುದು. ಈ ಭಾಗದಲ್ಲಿ ಚಿಕ್ಕ ಬಡಾವಣೆ ನಿರ್ಮಾಣವಾಗಿದೆ. ಕೆಲ ಸೌಲಭ್ಯಗಳು ಸಮರ್ಪಕವಾಗಿಲ್ಲ ಎಂದು ತಿಳಿಸಿದರು.

ರಾಮ್ ಅಂಡ್ ಕೋ ವೃತ್ತದಲ್ಲಿ ಮರಗಳ ತೆರವು ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಹಿಂದೆ ಸ್ಮಾರ್ಟ್ ಸಿಟಿಯವರು ಪುಟ್‌ಪಾತ್ ದೊಡ್ಡದಾಗಿ ಮಾಡಿದ್ದಾರೆ. ಇದರಿಂದಾಗಿ ರಸ್ತೆ ಸಂಚಾರ ಚಿಕ್ಕದಾಗಿದೆ. ಅದನ್ನು ತೆರವು ಮಾಡಿ ಹಿಂದೆ ಹಾಕಬೇಕು. ಅಂದರೆ ಫುಟ್ ಪಾತ್ ಅನ್ನು ಚಿಕ್ಕದಾಗಿ ಮಾಡಿದಾಗ ಸರ್ಕಲ್ ದೊಡ್ಡದಾಗುತ್ತದೆ. ವೃತ್ತದ ಬಳಿ 3-4 ಮರಗಳಿವೆ. ಅಲ್ಲಿನ ನಿವಾಸಿಗಳು ಮರ ಕಡಿದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇ ಕೆಂದು ಮನವಿ ಮಾಡುತ್ತಿದ್ದಾರೆ. ಮರ ಕಡಿದಾಗ ಪಕ್ಕದಲ್ಲಿ ಗಿಡ ನೆಡ ಬೇಕಿದೆ. ಅತ್ಯಂತ ಉತ್ತಮ ತಳಿಯ ಸಸಿಗಳಿವೆ. ಒಳ್ಳೆಯ ಸಸಿಗಳನ್ನೇ ನೆಡಲಾಗುವುದು ಎಂದವರು ಹೇಳಿದರು. 

ಮೈಸೂರು ನಗರದಂತೆ ದಾವಣಗೆರೆ ಯನ್ನು ಅಭಿವೃದ್ದಿ ಮಾಡಲಾಗುವುದು. ಬಜೆಟ್‌ನಲ್ಲಿ ಘೋಷಿಸಿರುವಂತೆ 1 ಲಕ್ಷ ಸಸಿ ನೆಡುವ ಕಾರ್ಯಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ ಕೊಡುವ ಉದ್ದೇಶವಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ. ಜನರ ಮನೆ ಬಾಗಿಲಿಗೆ ನಗರ ಪಾಲಿಕೆ ಉದ್ದೇಶವನ್ನು ಶೀಘ್ರದಲ್ಲೇ ಕಾರ್ಯಗತ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪ ಮೇಯರ್ ಸೌಮ್ಯ ನರೇಂದ್ರ, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್, ಗೌರಮ್ಮ ಗಿರೀಶ್, ಜಯಮ್ಮ ಗೋಪಿನಾಯ್ಕ್, ಪಾಲಿಕೆ ಸದಸ್ಯರಾದ ನಾಗರಾಜ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಬನಶಂಕರಿ ಬಡಾವಣೆಯ ಸಮಿತಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.