ಬಿಎಸ್-6 ಇಂಧನದಲ್ಲಿ ವ್ಯತ್ಯಾಸವಿಲ್ಲ

ಬಿಎಸ್-6 ಇಂಧನದಲ್ಲಿ ವ್ಯತ್ಯಾಸವಿಲ್ಲ

ದಾವಣಗೆರೆ, ನ.7- ಸರ್ಕಾರಿ ಸ್ವಾಮ್ಯ, ಖಾಸಗಿ ಸೇರಿದಂತೆ ಎಲ್ಲಾ ಪೆಟ್ರೋಲ್ ಬಂಕ್‍ಗಳಲ್ಲಿ ಮಾರಾಟವಾಗುತ್ತಿರುವ ಬಿಎಸ್-6 ಇಂಧನದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಜಿಲ್ಲಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಖಾಸಗಿ ಕಂಪನಿಗಳಾದ ರಿಲಯನ್ಸ್, ಎಸ್ಸಾರ್, ಎಂಆರ್‍ಪಿಎಲ್, ಶೆಲ್‍ಗಳಲ್ಲಿ ಮಾರಾಟ ಮಾಡುತ್ತಿರುವ ಬಿ.ಎಸ್-6 ಇಂಧನ ಒಂದೇ ಆಗಿದ್ದು, ಇದರಲ್ಲಿ ಸಾರ್ವಜನಿಕರಿಗೆ ಯಾವುದೇ ಗೊಂದಲ ಬೇಡ ಎಂದು ಅಸೋಸಿಯೇಷನ್ ಅಧ್ಯಕ್ಷ ಎ.ಬಿ. ಶಂಭುಲಿಂಗಪ್ಪ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ. 2020ರಿಂದ ಸರ್ಕಾರಿ ಒಡೆತನದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಂದ ಬಿಎಸ್-6 ಇಂಧನವನ್ನು ಎಲ್ಲಾ ಇಂಧನ ಕೇಂದ್ರಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಏಪ್ರಿಲ್ 2020ರಿಂದ ಖಾಸಗಿ ಕಂಪನಿಗಳೂ ಅಧಿಕೃತವಾಗಿ ಬಿಎಸ್-6 ಇಂಧನ ಮಾರಾಟ ಪ್ರಾರಂಭಿಸಿವೆ. ಕರ್ನಾಟಕ ಒಂದೇ ಟರ್ಮಿನಲ್, ಡಿಪೋದಿಂದಲೇ ಎಲ್ಲಾ ಕಡೆಗೆ ಇಂಧನ ಪೂರೈಕೆಯಾಗುತ್ತಿದೆ. 

ಗ್ರಾಹಕರು ಸಹ ಎಲ್ಲಾ ಇಂಧನ ಕೇಂದ್ರಗಳಲ್ಲಿ ಇಂಧನದ ಗುಣಮಟ್ಟ, ಪ್ರಮಾಣ ಪರಿಶೀಲಿಸಲು ಸಂಪೂರ್ಣ ಅಧಿಕಾರ ಉಳ್ಳವರಾಗಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್‍ನ ಡಿ.ಎಸ್. ಸಿದ್ದಣ್ಣ, ವಿನಯಕುಮಾರ್ ಇದ್ದರು.

Leave a Reply

Your email address will not be published.