ಹರಪನಹಳ್ಳಿ, ಅ.27- ಜಯಕರ್ನಾಟಕ ಸಂಘದ ತಾಲ್ಲೂಕು ಅಧ್ಯಕ್ಷರು ಬೆದರಿಕೆ ಹಾಕಿ, ಹಣದ ಬೇಡಿಕೆ ಇಟ್ಟಿದ್ದು, ಅವರ ಹಾಗೂ ಅವರ ಸಹಚರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಮಹೇಶ್ ನರ್ಸಿಂಗ್ ಹೋಮ್ನ ವೈದ್ಯಾಧಿಕಾರಿ ಡಾ.ಮಹೇಶ್ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗೋವಿಂದ್ ಅವರು ಏಕಾಏಕಿ ತಮ್ಮ ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿ ತಮ್ಮ ವೃತ್ತಿಗೆ ಅಡ್ಡಿಯುಂಟು ಮಾಡಿದ್ದಾರೆ. ಮುಬೀನಾ ಬಾನು ಎಂಬುವವರ ವಿಚಾರ ವಾಗಿ 25 ಲಕ್ಷ ರೂ. ಹಣ ನೀಡಿ ಎಂದು ನನಗೆ ಕಾನೂನು ಬಾಹಿರ ಬೇಡಿಕೆ ಹಾಗೂ ಬೆದರಿಕೆ ಹಾಕಿದ್ದಾರೆ.
ಆಸ್ಪತ್ರೆಯಲ್ಲಿ ಗಲಾಟೆ ಮಾಡಿ, ಹೆದರಿಸಿ ಸಿಬ್ಬಂದಿಯಿಂದ 5 ಸಾವಿರ ಹಣ ಪಡೆದಿದ್ದಾರೆ ಎಂದು ಡಾ. ಮಹೇಶ್ ಆರೋಪಿಸಿದ್ದಾರೆ.
ಈ ಎಲ್ಲಾ ವಿಚಾರವನ್ನು ಭಾರತೀಯ ವೈದ್ಯಕೀಯ ಸಂಘಕ್ಕೂ ತಿಳಿಸಲಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಈ ದೂರನ್ನು ಪಟ್ಟಣ ಠಾಣೆಯ ಪಿಎಸ್ಐ ಪ್ರಕಾಶ್ ಹಾಗೂ ಸಿಪಿಐ ಕುಮಾರ್ ಅವರಿಗೆ ಸಲ್ಲಿಸಿದ್ದಾರೆ.
ಡಾ.ಮಹೇಶ್ ಅವರ ಸಹಾಯಕ್ಕೆ ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಘಟಕದ ಎಲ್ಲಾ ಪದಾಧಿಕಾರಿಗಳು ಆಗಮಿಸಿದ್ದು, ಅವರುಗಳೂ ಸಹ ಪೊಲೀಸ್ ಠಾಣೆಗೆ ಆಗಮಿಸಿ, ಆರೋಪಿ ವಿರುದ್ಧ ಕ್ರಮಕ್ಕೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
Leave a Reply