ಯೋಗ, ಆಯುರ್ವೇದ ಚಿಕಿತ್ಸೆಗಳತ್ತ ಗಮನ ಹರಿಸಿ : ಆಶಾ ಮುರುಳೀಧರ

ಯೋಗ, ಆಯುರ್ವೇದ ಚಿಕಿತ್ಸೆಗಳತ್ತ ಗಮನ ಹರಿಸಿ : ಆಶಾ ಮುರುಳೀಧರ

ದಾವಣಗೆರೆ, ಅ. 23- ಯೋಗ ಮತ್ತು ಆಯುರ್ವೇದ ಚಿಕಿತ್ಸೆಗಳು ಆರೋಗ್ಯಕ್ಕೆ ಉತ್ತಮ ಹಾಗೂ ಯಾವುದೇ ಅಡ್ಡ ಪರಿಣಾಮಗಳನ್ನು ಇರುವುದಿಲ್ಲ. ಕಾರಣ ಜನರು ಆಯುರ್ವೇದ ಚಿಕಿತ್ಸೆಯತ್ತ ಗಮನ ಹರಿಸಬೇಕೆಂದು ಕಾಡಜ್ಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ಆಶಾ ಮುರುಳೀಧರ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾಡಜ್ಜಿ ಗ್ರಾಮದ ಸಮುದಾಯ ಭವನದ ಆಯುರ್ವೇದ ಕ್ಷೇಮ ಕೇಂದ್ರದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾ ಆಯುಷ್ ಇಲಾಖೆ ಮತ್ತು ಜಿಲ್ಲಾ ಪಂಚಾಯತ್, ದಾವಣಗೆರೆ, ರಾಷ್ಟ್ರೀಯ ಆಯುಷ್ ಅಭಿಯಾನ, ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಆಯೋಜಿಸಲಾಗಿದ್ದ ಯೋಗ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 

ಕಾಡಜ್ಜಿ ಗ್ರಾಪಂನ ಮಾಜಿ ಉಪಾಧ್ಯಕ್ಷೆ ಸುಧಾ ಕರಿ ಬಸಪ್ಪ ಮಾತನಾಡಿ, ಯೋಗದ ಉಪಯೋಗ ತಿಳಿಸಿದರು. 

ಸಮುದಾಯ ಭವನದ ಅಧ್ಯಕ್ಷ ಟಿ.ರುದ್ರಪ್ಪ ಮಾತನಾಡಿ, ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನಾವು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಕಾಡಜ್ಜಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿ ಕಾರಿ ಡಾ.ದ್ಯಾವನಗೌಡ, ಗ್ರಾಪಂ ಪಿಡಿಓ ಕೆಂಚಪ್ಪ, ಯೋಗ ತರಬೇತುದಾರ ಆನಂದ್‍ಕುಮಾರ್ ಮಾತನಾಡಿದರು.  

Leave a Reply

Your email address will not be published.