ಜಯ ಮೃತ್ಯುಂಜಯ ಶ್ರೀಗಳ ಹೋರಾಟಕ್ಕೆ ಬೆಂಬಲ

ಜಯ ಮೃತ್ಯುಂಜಯ ಶ್ರೀಗಳ ಹೋರಾಟಕ್ಕೆ ಬೆಂಬಲ

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಒಮ್ಮತದ ನಿರ್ಧಾರ

ದಾವಣಗೆರೆ, ಅ. 23-  2ಎ ಮೀಸಲಾತಿಗಾಗಿ ಕೂಡಲ ಸಂಗಮ ಪೀಠದ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಇದೇ 28 ರಂದು ನಡೆಯುವ ಹೋರಾಟಕ್ಕೆ ಬೆಂಬಲ ನೀಡಲು ದಾವಣಗೆರೆ ಜಿಲ್ಲೆಯ ವೀರಶೈವ ಲಿಂಗಾಯತ  ಪಂಚಮಸಾಲಿ ಸಮಾಜದ ಮುಖಂಡರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. 

ಇಲ್ಲಿನ ಸದ್ಯೋಜಾತ ಶಿವಾಚಾರ್ಯ ಹಿರೇಮಠದ ಸಭಾಂಗಣದಲ್ಲಿ ನಡೆದ ಸಮಾಜದ ಪೂರ್ವಭಾವಿ ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ  2ಎ ಮೀಸಲಾತಿ ಅತ್ಯವಶ್ಯಕವಾಗಿದೆ ಎಂದು ಮುಖಂಡರು ಪ್ರತಿಪಾದಿಸಿದರು.

ಸಮಾಜ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆಯಬೇಕಾದರೆ ಮೀಸಲಾತಿ ಬೇಕಿದೆ. ಆದರೆ ಇಂದು ಸರ್ಕಾರದ ಸೌಲಭ್ಯಗಳಿಂದ ಸಮಾಜ ವಂಚಿತವಾಗುತ್ತಿದೆ ಎಂದು ಸಮಾಜದ ಯುವ ಮುಖಂಡ ಶ್ರೀಧರ್ ಪಾಟೀಲ್ ತಿಳಿಸಿದರು. 

ಬಿಜೆಎಂ ಶಾಲೆಯ ಕಾರ್ಯದರ್ಶಿ ಅಗಡಿ ಮಂಜುನಾಥ್,  ಸಮಾಜದ ಹಿತಕ್ಕಾಗಿ ಶ್ರೀಗಳು ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಸಮಾಜದ ಸಂಪೂರ್ಣ ಬೆಂಬಲ ನೀಡುವ ಅಗತ್ಯವಿದೆ ಎಂದರು

ಇದೇ ವೇಳೆ ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ಜನ್ಮ ದಿನೋತ್ಸವದ ಅಂಗವಾಗಿ  ಚೆನ್ನಮ್ಮಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. 

ಕೆ.ಎಸ್. ಮಂಜಣ್ಣ, ಜಿ.ವಿ ಪಾಟೀಲ್, ರಾಜಶೇಖರ್ ಎಂ, ಚಂದ್ರಶೇಖರ್ ಗೌಡ, ಜೆ.ಹೆಚ್ ಓಂಕಾರಪ್ಪ, ಕಾರಿಗನೂರು ಬಸವರಾಜು, ಕಾರಿಗನೂರು ಗಂಗಾಧರ್, ಮನೋಜ್, ಮೋಹನ್ ಟಿ.ಓ ಹಾಗೂ ಶೈಲಾ ಶಾಂತಲಾ ಮತ್ತು ಜಗದೀಶ್ ಮಾಯಕೊಂಡ, ತಣಿಗೆರೆ ಶಿವಕುಮಾರ್  ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.