ಲಾರಿಗಳಲ್ಲಿ ಕಸಾಯಿಖಾನೆಗೆ ಹೊತ್ತೊಯ್ಯುತ್ತಿದ್ದ ಜಾನುವಾರಗಳ ವಶ

ಲಾರಿಗಳಲ್ಲಿ ಕಸಾಯಿಖಾನೆಗೆ ಹೊತ್ತೊಯ್ಯುತ್ತಿದ್ದ ಜಾನುವಾರಗಳ ವಶ

ಕೂಡ್ಲಿಗಿ, ಅ. 22- ಯಾವುದೇ ಪರವಾನಿಗೆ ಇಲ್ಲದೆ ಹರಿಯಾಣದಿಂದ ಕೇರಳಕ್ಕೆ ಎರಡು ಲಾರಿಗಳಲ್ಲಿ ಹೊತ್ತೊ ಯ್ಯುತ್ತಿದ್ದ 49ಜಾನುವಾರು ಗಳನ್ನು ಎನ್ ಜಿ ಓ ನೌಕರ ನೀಡಿದ ದೂರಿನ ಮೇರೆಗೆ ಹೊಸಹಳ್ಳಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿ ರುವ ಘಟನೆ ತಾಲ್ಲೂಕಿನ ಇಮಡಾಪುರ ಸಮೀಪ ನಿನ್ನೆ ಜರುಗಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ದಾಳಿ ಮಾಡಿದ್ದು, 48 ಎಮ್ಮೆ, ಒಂದು ಕೋಣ ಎರಡು ಲಾರಿಗಳಲ್ಲಿದ್ದು ಅದರಲ್ಲಿ 4 ಎಮ್ಮೆಗಳು  ಆಹಾರವಿಲ್ಲದೆ ಅದರಲ್ಲೇ ಸತ್ತಿವೆ ಎಂದು  ಹೇಳಲಾಗಿದೆ.

ಹೊಸಹಳ್ಳಿ ಠಾಣಾ ಪಿಎಸ್ಐ ನಾಗರತ್ನ ಎರಡೂ ಲಾರಿಗಳಲ್ಲಿದ್ದ ಪಂಜಾಬ್ ನ ಜಿಹಾರ್ ಸಿಂಗ್, ಅಜಿತ್ ಸಿಂಗ್, ಬಿಹಾರ್ ನ ಸಾಗರ್ ಯಾದವ್, ಹರೀಶರಾಯ್ ಮತ್ತು ಹರಿಯಾಣದ ಉತ್ತಮ ಪ್ರಕಾಶ್ ಹಾಗೂ ಲಾರಿ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.