ರೆಡ್ಡಿ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಜಿಲ್ಲಾ ರೆಡ್ಡಿ ಜನಸಂಘದ ಒತ್ತಾಯ

ರೆಡ್ಡಿ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಜಿಲ್ಲಾ ರೆಡ್ಡಿ ಜನಸಂಘದ ಒತ್ತಾಯ

ದಾವಣಗೆರೆ, ಅ.21- ರಾಜ್ಯದ 28 ಜಿಲ್ಲೆಗಳಲ್ಲಿ ಬಹುತೇಕ ರೆಡ್ಡಿ ಸಮುದಾಯದ ಜನರು ಕೃಷಿ ಪ್ರಧಾನ ಕುಟುಂಬ ಮತ್ತು ಉದ್ಯೋಗಸ್ಥರಾಗಿದ್ದು, ಇವರಲ್ಲಿ ಅನೇಕರು ಬಡತನ ಸ್ಥಿತಿಯಲ್ಲಿದ್ದು, ಒಕ್ಕಲುತನವನ್ನೇ ತಮ್ಮ ಉಸಿರಾಗಿಸಿಕೊಂಡು ಬದುಕು ಸಾಗಿಸುತ್ತಿರುವ ಬಹುತೇಕ ರೆಡ್ಡಿ ಸಮುದಾಯದ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ರೆಡ್ಡಿ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕದಲ್ಲಿ ಸುಮಾರು 95 ಲಕ್ಷ ರೆಡ್ಡಿ ಜನಾಂಗದವರಿದ್ದು, ಇವರಲ್ಲಿ ಶೇ. 70 ಜನ ಬಡತನ ರೇಖೆಗಿಂತ ಕೆಳಗಿನ ಸ್ಥಿತಿಯಲ್ಲಿದ್ದು, ಈಗಿನ ತಲೆಮಾರಿನ ಯುವಕರಿಗೆ ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ನೀಡುವುದರ ಜೊತೆಗೆ ಅವರುಗಳಿಗೆ ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿಗೊಳಿಸಿ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು. ರೆಡ್ಡಿ ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಿದರೆ ರೆಡ್ಡಿ ಸಮುದಾಯಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ರೆಡ್ಡಿ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನವನ್ನು ಬಿಡುಗಡೆ ಮಾಡಿ ಈ ಸಮಾಜ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರ ನೀಡಬೇಕೆಂದು ಜಿಲ್ಲಾ ರೆಡ್ಡಿ ಜನಸಂಘ ಒತ್ತಾಯಿಸಿದೆ.

Leave a Reply

Your email address will not be published.