ದೇವರಾಜ ಅರಸು ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ದೇವರಾಜ ಅರಸು ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ದಾವಣಗೆರೆ, ಅ. 21 – ನಗರದ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್‌ನಲ್ಲಿ ನಗರ ಪಾಲಿಕೆಯ 18ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಅವರ ನೇತೃತ್ವದಲ್ಲಿ ನಾಗರಿಕ ಹಿತ ರಕ್ಷಣಾ ಸಮಿತಿಯೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. 

ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷರೂ, ವಕೀಲ ಎಂ.ಸಿ.ಎಂ. ತೀರ್ಥಪ್ಪ, ಕಾಂಗ್ರೆಸ್ ಮುಖಂಡ ಉಮೇಶ್, ಸಮಾಜ ಸೇವಕ ಕೆ.ಎಂ. ವೀರಯ್ಯ ಸ್ವಾಮಿ, ವಕೀಲರಾದ ಶ್ರೀಮತಿ ವಸುಂಧರಾ ಅವರುಗಳು ಮನೆ-ಮನೆಗಳಿಗೆ ಹೋಗಿ ಸ್ವಚ್ಛತೆಗೆ ಆದ್ಯತೆ ನೀಡಿ, ಕಸವನ್ನು ಪಾಲಿಕೆ ವಾಹನದಲ್ಲಿ ಹಾಕುವಂತೆ ಮನವಿ ಮಾಡಿದರು.  ಸ್ವಚ್ಛತಾ ಕಾರ್ಯಕ್ರಮದಲ್ಲಿ ಹಿತ ರಕ್ಷಣಾ ಸಮಿತಿ ಕಾರ್ಯದರ್ಶಿ ನಟರಾಜ್, ಬಾಬು, ಶಿವಮೂರ್ತಿ, ಲೋಹಿತ್, ಪಾಲಿಕೆ ದಫೇದಾರ್ ನಿಂಗರಾಜು ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.