ಜನಾಂದೋಲನ ಅಭಿಯಾನಕ್ಕೆ ಚಾಲನೆ

ಜನಾಂದೋಲನ ಅಭಿಯಾನಕ್ಕೆ ಚಾಲನೆ

ಮಲೇಬೆನ್ನೂರು, ಅ. 21 -ಇಲ್ಲಿನ ಪುರಸಭೆ ಪೊಲೀಸ್ ಇಲಾಖೆ, ನಾಡ ಕಛೇರಿ ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ ಪಟ್ಟಣದಲ್ಲಿ ಕೋವಿಡ್-19 ಕುರಿತು ಜನಾಂದೋಲನ ಅಭಿಯಾನವನ್ನು ನಡೆಸಲಾಯಿತು.

ಪುರಸಭೆ ಮುಂಭಾಗ ಅಭಿಯಾನಕ್ಕೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಉಪತಹಶೀಲ್ದಾರ್ ಆರ್.ರವಿ ಅವರು ಹಸಿರು ನಿಶಾನೆ ತೋರಿದರು. 

ಈ ಸಂದರ್ಭದಲ್ಲಿ ಧರಣೇಂದ್ರ ಕುಮಾರ್ ಅವರು ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ನಿರ್ದೇಶನದಂತೆ ಜನಾಂದೋಲನ ಅಭಿಯಾನ ಕೈಗೊಂಡಿದ್ದು, ಸಾರ್ವಜನಿಕರು ಈ ಅಭಿಯಾನಕ್ಕೆ ಕೈ ಜೋಡಿಸಿ ಕೊರೊನಾ ಮುಕ್ತ ಪಟ್ಟಣವನ್ನಾಗಿಸಲು ಸಹಕರಿಸ ಬೇಕೆಂದು ಮನವಿ ಮಾಡಿದರು. ಎಎಸ್‍ಐ ಬಸವರಾಜ್ ಕಾನೂನು ಸೇವಾ ಪ್ರಾಧಿಕಾರದ ವಕೀಲರಾದ ನಾಗರಾಜ್ ನಂದಿತಾವರೆ, ತಿಮ್ಮನಗೌಡ, ಪುರಸಭೆ ಸದಸ್ಯರಾದ ಬಿ.ಸುರೇಶ್, ದಾದಾವಲಿ, ಫಕೃದ್ದೀನ್, ಬರ್ಕತ್ ಅಲಿ ಪುರಸಭೆ ಅಧಿಕಾರಿಗಳಾದ ಉಮೇಶ್‍, ಗುರುಪ್ರಸಾದ್, ನವೀನ್, ಗಣೇಶ್, ಪ್ರಭು ಸೇರಿದಂತೆ ಇನ್ನೂ ಮುಂತಾದವರು ಭಾಗವಹಿಸಿದ್ದರು. 

Leave a Reply

Your email address will not be published.